ಪಾವಗಡ: ತಾಲೂಕಿನಲ್ಲಿ ಇರುವಂತಹ ಎಲ್ಲಾ ಸರ್ಕಾರಿ ನೌಕರರು ಮಾರ್ಚ್ 1ನೇ ತಾರೀಕಿನಂದು ಕರ್ತವ್ಯಕ್ಕೆ ಹಾಜರಾಗದೆ ತಮ್ಮ ಮನೆಗಳಲ್ಲಿ ಇದು 7ನೇ ವೇತನ ಆಯೋಗವನ್ನು ಜಾರಿ ಗೊಳಿಸಬೇಕು ಎಂದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಪಾವಗಡ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಾ.ಜಿ. ಕಿರಣ್ ತಿಳಿಸಿದರು.
ಪಾವಗಡ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನಾ ಸಮಯದಲ್ಲಿ ಕರ್ನಾಟಕ ಸರ್ಕಾರದ ಸರ್ಕಾರಿ ನೌಕರರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಗಲಿರುಳು ಸೇವೆ ಮಾಡಿರುತ್ತೇವೆ. 5 ವರ್ಷಗಳು ಮುಗಿದ ನಂತರವೂ ಸಹ ಏಳನೇ ವೇತನ ಆಯೋಗವನ್ನು ಜಾರಿ ಮಾಡದೆ ಸರ್ಕಾರ ನಿರ್ಲಕ್ಷಿಸಿದೆ. ಇದಲ್ಲದೆ ಎನ್ ಪಿಎಸ್ ಸಹ ರದ್ದುಗೊಳಿಸಿ ಒಪಿಎಸ್ ಜಾರಿ ಮಾಡಬೇಕು ಎಂದು ಇದೇ ವೇಳೆ ಗಟ್ಟಿ ಧ್ವನಿಯಲ್ಲಿ ಪಾವಗಡ ತಾಲೂಕಿನ ಸರ್ಕಾರಿ ನೌಕರರು ಗುಡುಗಿದ್ದಾರೆ ಎಂದರು.
ಇನ್ನು ಸರ್ಕಾರ ಈ ಒಂದು ಬೇಡಿಕೆಗಳನ್ನು ಫೆಬ್ರವರಿ 27ರ ಒಳಗಾಗಿ ಈಡೇರಿಸದಿದ್ದರೆ. ಮಾರ್ಚ್ ಒಂದನೇ ತಾರೀಖಿನಿಂದ ತಾಲೂಕಿನಲ್ಲಿ ಇರುವ ಎಲ್ಲಾ ಸರ್ಕಾರಿ ಶಾಲೆಗಳು, ಸರ್ಕಾರಿ ಕಚೇರಿಗಳು, ಸರ್ಕಾರಿ ಆಸ್ಪತ್ರೆಗಳು ಜೊತೆಗೆ ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರು ಯಾರು ಸಹ ಕರ್ತವ್ಯಕ್ಕೆ ಹಾಜರಾಗದೆ ಕಚೇರಿಗಳು ಸಹ ಕಾರ್ಯ ನಿರ್ವಹಿಸುವುದಿಲ್ಲ ಎಂದು ಇದೆ ವೇಳೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ನರಸಿಂಹ ,ಆರ್ ಎಂ ಮಂಜುನಾಥ್, ಶ್ರೀ ಕೃಷ್ಣ ಧನುಜಯ, ನಾಗೇಂದ್ರ, ಸರಸ್ವತಮ್ಮ ಬಿ ಎಲ್ ಎನ್ ಕುಮಾರ್, ಐ ಎ ನಾರಾಯಣಪ್ಪ, ಸಾವಿತ್ರಮ್ಮ , ಲಕ್ಷ್ಮೀದೇವಿ ನಾಗ , ವೀಣಾ ಪ್ರಭಾವತಿ, ನಾರಾಯಣಪ್ಪ , ರಿಜ್ವಾನ್ ಬೊಮ್ಮಣ್ಣ , ಚೌಡಪ್ಪ, ಮಂಜುನಾಥ ಗಂಗಾಧರ್, ಕರಿಯಣ್ಣ, ಸೇರಿದಂತೆ ವಿವಿಧ ಸರ್ಕಾರಿ ನೌಕರರ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy