ಚೆನ್ನೈ: ಕೊರೊನಾ ಹೆಚ್ಚಾಗಿರುವುದರಿಂದ ನೈಟ್ ಕಫ್ರ್ಯೂ ಹಾಗೂ ವೀಕೆಂಡ್ ಕರ್ಫ್ಯೂಗಳನ್ನು ಜಾರಿ ಮಾಡಿದ್ದರೂ ಕೂಡ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುವ ಸಾರ್ವಜನಿಕರಿಂದ 3.45 ಕೋಟಿ ರೂ.ಗಳನ್ನು ಪೊಲೀಸರು ದಂಡದ ರೂಪದಲ್ಲಿ ಸಂಗ್ರಹಿಸಿದ್ದಾರೆ.
ಪೊಲೀಸ್ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ ಮಾಸ್ಕ್ ಧರಿಸದೆ ಉಡಾಫೆ ತೋರಿಸುತ್ತಿದ್ದ 1.64 ಲಕ್ಷ ಮಂದಿ, ಸಾಮಾಜಿಕ ಅಂತರ ಕಾಪಾಡದ 2,000 ಜನರು, ಹಾಗೂ ಅನಗತ್ಯವಾಗಿ ಗುಂಪು ಗೂಡಿದ್ದ 1,552 ಮಂದಿಗೆ ದಂಡ ವಿಧಿಸಲಾಗಿದೆ.
ಇನ್ನು ನೈಟ್ ಕರ್ಫ್ಯೂ ಇದ್ದರೂ ಕೂಡ ಅಗತ್ಯ ದಾಖಲೆ, ಮಾಹಿತಿ ನೀಡದೆ ಬೇಕಾಬಿಟ್ಟಿ ಅಡ್ಡಾಡುತ್ತಿದ್ದ ಸವಾರರು ಹಾಗೂ ಚಾಲಕರನ್ನು ತಡೆದು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಚೆನ್ನೈ ನಗರ ಒಂದರಲ್ಲೇ 300 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೋವಿಡ್ ನಿಯಮಗಳನ್ನು ಮೀರಿ ಸಾರ್ವಜನಿಕರ ಸ್ಥಳಗಳಲ್ಲೇ ಮಾಸ್ಕ್ ಧರಿಸದೆ ಓಡಾಡುತ್ತಿರುವುದರಿಂದ ಪೊಲೀಸರು ದಂಡ ವಿಧಿಸುತ್ತಿದ್ದು ಚೆನ್ನೈ ನಗರ ಒಂದರಲ್ಲೇ 43,417 ಮಂದಿಯಿಂದ 86 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸ್ ಇಲಾಖೆಯು ಮಾಹಿತಿ ನೀಡಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy