ಟೆಕ್ ದೈತ್ಯ, ಮೆಟಾ ಸಿಇಒ ಮಾರ್ಕ್ ಜುಕರ್ ಬರ್ಗ್ ತಮ್ಮ ದಿನಚರಿಯ ಬಗ್ಗೆ ಹೇಳಿಕೊಂಡಿದ್ದಾರೆ. ಎಚ್ಚರವಾದಾಗ ಫೋನ್ ನೋಡುವುದರೊಂದಿಗೆ ತನ್ನ ದಿನ ಆರಂಭವಾಗುತ್ತದೆ ಎಂದು ಹೇಳಿರುವ ಅವರು, ಬೆಳಿಗ್ಗೆ ಎದ್ದ ತಕ್ಷಣ ನಾನು ಮಾಡುವ ಮೊದಲ ಕೆಲಸ ನನ್ನ ಫೋನ್ ನಲ್ಲಿ ಫೇಸ್ ಬುಕ್ ತೆರೆಯುವುದು. ಜಗತ್ತಿನಲ್ಲಿ ಏನಾಗುತ್ತಿದೆ ಎಂದು ತಿಳಿಯುವುದು ಎಂದಿದ್ದಾರೆ.
ನಿಜ ಹೇಳಬೇಕೆಂದರೆ, ಲೆನ್ಸ್ ಇಲ್ಲದೆ ನನಗೆ ಸರಿಯಾಗಿ ಕಾಣುವುದಿಲ್ಲ. ಹೀಗೆ ಮಾಡುವುದು ತಪ್ಪು ಎಂದು ಗೊತ್ತಿದ್ದರೂ. ನಾನು ಫೋನ್ ನೋಡುತ್ತೇನೆ ಎಂದು ಬರ್ಗ್ ಹೇಳಿದ್ದಾರೆ.


