ಬೆಳಗಾವಿ ನಗರದ ಮರ್ಯಾದ ಪುರುಷೋತ್ತಮ್ ಶ್ರೀರಾಮ ದೇವಸ್ಥಾನಗಳಲ್ಲಿ ರಾಮನವಮಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರಾಮನವಮಿ ಹಿನ್ನೆಲೆಯಲ್ಲಿ ಅನಗೋಳ ಪ್ರದೇಶದಲ್ಲಿ
ಪ್ರತಿ ವರ್ಷದಂತೆ ಈ ವರ್ಷವೂ ಪ್ರಭು ಶ್ರೀರಾಮ ಜಯಂತಿಯನ್ನು ಆಚರಿಸಲಾಯಿತು.
ಬುಧವಾರ ಸಂಜೆ ಅನಗೋಳ ನಾಕಾ ದಿಂದ ಹರಿ ಮಂದಿರದ ಮೂಲಕ ಕುರಬರ್ ಗಲ್ಲಿಯಲಿ ಶ್ರೀರಾಮನ ಮೂರ್ತಿಯನ್ನು ರಥದಲ್ಲಿ ಮೆರವಣಿಗೆ ಮಾಡಲಾಯಿತು. ಶ್ರೀರಾಮ.ಸೇನೆ ಹಿಂದೂಸ್ತಾನ್, ಜೈ ಅಮರ ಶಿವಾಜಿ ಮಂಡಲದ, ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶ್ರೀರಾಮಸೇನೆ ಹಿಂದೂಸ್ಥಾನದ ಸಂಸ್ಥಾಪಕ
ರಮಾಕಾಂತ್ ಕೊಂಡುಸ್ಕರ್ ಮೆರವಣಿಯಲ್ಲಿಭಾಗವಹಿಸಿ ಶ್ರೀರಾಮನಿಗೆ ಪುಷ್ಪಾರ್ಚನೆ ಸಲ್ಲಿಸಿದರು.ಈ ವೇಳೆ ಅನೇಕ ಭಕ್ತರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ತಡರಾತ್ರಿಯವರೆಗೂ ನಡೆದ ಈ ಶೋಭಾ ಯಾತ್ರೆಯಲ್ಲಿ ಹಲವು ಯುವಕರು ಪಾಲ್ಗೊಂಡಿದ್ದರು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಡಾಲ್ಬಿಯಂತಹ ಕರ್ಕಶ ಶಬ್ದಕ್ಕೆ ಅವಕಾಶ ನೀಡದ ಕಾರಣ ಕಾರ್ಯಕರ್ತರು ಸಾಯಕಾಲದಲ್ಲಿ ಮೆರವಣಿಗೆ ನಿಲ್ಲಿಸಿ ,ಕುರಬರ ಗಲ್ಲಿಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಮಾಡಿ ,
ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಅಧ್ಯಕ್ಷ ಹರ್ಷದ್ ಜಾಧವ, ಉಪಾಧ್ಯಕ್ಷ ಕಾರ್ತಿಕ್ ಗುಳ್ನವರ ಹಾಗೂ ಪದಾಧಿಕಾರಿಗಳು ಹಾಗೂ ಜೈ ಶಿವಾಜಿ ಮಂಡಳದ ಕಾರ್ಯಕರ್ತರು ಮೆರವಣಿಗೆ ಭಾಗವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


