ತುರುವೇಕೆರೆ: ಪಟ್ಟಣದ ಬಾಣಸಂದ್ರ ವೃತ್ತದಲ್ಲಿ ಶಾಸಕ ಮಸಾಲ ಜಯರಾಮ್ ರವರು ಎಂಎಂಎಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿ ಇಂದು ಪಟ್ಟಣಕ್ಕೆ ಆಗಮಿಸಿದ್ದರು.
ಬೆಳಿಗ್ಗೆ 10 ಗಂಟೆಯಿಂದಲೂ ನೂರಾರು ಕಾರ್ಯಕರ್ತರು ಹಾರ ತುರಾಯಿಗಳನ್ನು ಹಿಡಿದು ತಮ್ಮ ನೆಚ್ಚಿನ ನಾಯಕನ ಬರುವಿಕೆಯನ್ನು ಕಾಯುತ್ತಾ ಜಮಾವಣೆಗೊಂಡಿದ್ದರು.
ಪಟ್ಟಣಕ್ಕೆ ಸರ್ಕಾರಿ ವಾಹನದಲ್ಲಿ ಆಗಮಿಸಿದ ಶಾಸಕರನ್ನು ತಾವು ತಂದಿದ್ದ ಹಾರಗಳನ್ನು ಹಾಕುವ ಮೂಲಕ ತಮ್ಮ ತಮ್ಮ ನೆಚ್ಚಿನ ನಾಯಕರನ್ನು ಸ್ವಾಗತಿಸಿ. ಜೈಕಾರ ಕೂಗಿದರು ಮತ್ತು ತೆರೆದ ವಾಹನದಲ್ಲಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಬಿಜೆಪಿ ಬಾವುಟವನ್ನು ಹಾರಾಟ ಮಾಡಿ, ಪಟಾಕಿ ಸಿಡಿಸಿ ರಸ್ತೆ ಉದ್ದಕ್ಕೂ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಅದ್ದೂರಿ ಭವ್ಯ ಸ್ವಾಗತವನ್ನು ಕೋರಿದರು.
ಈ ಸಂದರ್ಭದಲ್ಲಿ ಕೊಂಡಜ್ಜಿ ವಿಶ್ವನಾಥ್, ವಿ ಬಿ ಸುರೇಶ್ ,ನಾಗಲಾಪುರ ಮಂಜುನಾಥ್, ಇನ್ನು ಹಲವಾರು ಮುಖಂಡರುಗಳು ಹಾಗೂ ಪಕ್ಷದ ಬೆಂಬಲಿಗರು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ, ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1