ತುರುವೇಕೆರೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಸಾಲ ಜಯರಾಮ್ ಅವರು ಗೆಲ್ಲುವುದು ನಿಶ್ಚಿತವಾಗಿದೆ ಎಂದು ಮಾಜಿ ಶಾಸಕ ಎಂ.ಡಿ.ಲಕ್ಷ್ಮಿ ನಾರಾಯಣ್ ರವರು ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರುಗಳು ಹಾಗೂ ಸಾರ್ವಜನಿಕರುಗಳು ಮನಸ್ಸಿನಲ್ಲಿರುವುದು ಎಲ್ಲಾ ಹಳ್ಳಿಗಳಲ್ಲಿ ಅಭಿವೃದ್ಧಿ ಕೆಲಸಗಳು ಮಾತಡುತ್ತವೆ ಹೀಗಾಗಿ ಅವರು ಗೆಲ್ಲುವುದು ನೂರಕ್ಕೆ ನೂರು ಸತ್ಯ ಎಂದರು.
ಹಳ್ಳಿಗಳ ಅಭಿವೃದ್ಧಿ ಅವರಿಗೆ ಅಧಿಕಾರ ನೀಡಿದೆ ಈ ಬಾರಿ 20,000 ಮತಗಳ ಅಂತರದಿಂದ ಜನರಲ್ಲಿ ಅವರದೇ ಆದ ರೀತಿಯಲ್ಲಿ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ . ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಸಹ ಜನರ ವಿಶ್ವಾಸವನ್ನು ಗಳಿಸಿ ಜನರ ಮನಸ್ಸನ್ನು ಗೆದ್ದಿದ್ದಾರೆ ಎಂದರು.
ಇವರು ಶಾಸಕರಾಗಿ ಆಯ್ಕೆಯಾಗುವುದು ಶತಸಿದ್ಧ ನಾನು ಸುಮಾರು 72 ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಕಾರ್ಯವನ್ನು ಮುಗಿಸಿ ಬಂದಿದ್ದೇನೆ . ಎಲ್ಲಿ ಹೋದರೂ ಕೂಡ ಬಿಜೆಪಿ ಅಲೆ ಇರುವುದು ತಿಳಿದು ಬಂದಿದ್ದು ಬಿಜೆಪಿಯು ಜಯಗಳಿಸಿ ಅಧಿಕಾರಕ್ಕೆ ಬರಲಿದೆ . ಎಲ್ಲ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳಿಂದ ಹಿಡಿದು ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದೇ ಕಾರಣವಾಗಿದೆ ಎಂದರು.
ಸಂಘ ಪರಿವಾರದವರು ಮಾಡಿದ್ದಾರೆ ಎನ್ನಲಾದ ಒಂದು ಸುದ್ದಿ ವೈರಲಾಗಿದ್ದು ಅದು ಹಳೆಯ ವಿಚಾರವಾಗಿದ್ದು ಈಗ ಈಗ ಅದನ್ನು ಕಾಂಗ್ರೆಸ್ ನವರು ಹರಡುತ್ತಿದ್ದಾರೆ . ಇದರಿಂದ ಅವರಿಗೆ ಯಾವುದೇ ಪ್ರಯೋಜನ ವಾಗುವುದಿಲ್ಲ ಕಾಂಗ್ರೆಸ್ ನವರು ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಹೇಳುತ್ತಿರುವುದು ಅವರ ಹತಾಶೆಗೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ಹೇಳಿದರು.
ಬಜರಂಗದಳವನ್ನು ನಿಷೇಧಿಸಲು ಕಾಂಗ್ರೆಸ್ ಅವರಿಂದ ಸಾಧ್ಯವಿಲ್ಲದ ಮಾತು. ಈ ರೀತಿಯ ಸಂಘಟನೆಗಳನ್ನು ರಾಜ್ಯ ಸರ್ಕಾರದಿಂದ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಜಗದೀಶ್ ಶೆಟ್ಟರ್ ಅವರು ಕೂಡ ಹೇಳಿಕೆ ನೀಡಿದ್ದಾರೆ . ಬಜರಂಗದಳದ ವಿಚಾರವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಬಾರದಿತ್ತು ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಸಹ ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲೆಯ 11 ಕ್ಷೇತ್ರಗಳಲ್ಲಿ 11 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ, ದಲಿತರು ಹಾಗೂ ಹಿಂದುಳಿದವರು ಕಾಂಗ್ರೆಸ್ಗೆ ಬೆಂಬಲವಾಗಿ ನಿಂತಿಲ್ಲ ಈ ಜನಾಂಗಕ್ಕೆ ಮೀಸಲಾತಿ ನೀಡಲು ನಾವು ಇದ್ದೇವೆ ನಮ್ಮ ಸರ್ಕಾರದಲ್ಲಿ ಮೀಸಲಾತಿಯನ್ನು ಹೆಚ್ಚುವರಿಯಾಗಿ ನೀಡಿದ್ದೇವೆ . ಇದೊಂದು ದುರುದ್ದೇಶ ಪೂರಕ ಹೇಳಿಕೆ ಆಗುವುದಿಲ್ಲ ಜನರು ಅರ್ಥ ಮಾಡಿಕೊಂಡು ಮತ ಚಲಾಯಿಸಿ ಎಂದರು.
ಮಂಡಲ ಅಧ್ಯಕ್ಷ ಮೃತ್ಯುಂಜಯ ಮಾತನಾಡಿ, ನರೇಂದ್ರ ಮೋದಿಯವರ ಕೈಯಲ್ಲಿ ದೇಶ ಸುರಕ್ಷಿತವಾಗಿದೆ ಹಾಗೂ 15 ಲಕ್ಷ ಕೋಟಿ ರಕ್ಷಣಾ ಸಾಮಗ್ರಿಗಳನ್ನು ದೇಶದಿಂದ ವಿದೇಶಗಳಿಗೆ ಮತ್ತು ಮಾಡಲಾಗುತ್ತಿದೆ. ಯಡಿಯೂರಪ್ಪನವರ ಕಾಲದಲ್ಲಿ ಸುಮಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ರಾಜ್ಯದಲ್ಲಿ ಜನ ಮನ್ನಣೆಯನ್ನು ಗಳಿಸಿ ಆಡಳಿತ ನೀಡಿದ್ದಾರೆ ಕಾರ್ಯಕರ್ತರು ಮೋದಿಯವರ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸಿದ್ದಾರೆ ಅವರಿಗೆಲ್ಲ ಧನ್ಯವಾದಗಳು ಎಂದರು.
ಈ ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ವಿ.ಟಿ.ವೆಂಕಟರಾಮಯ್ಯ, ವಿ.ಬಿ.ಸುರೇಶ್, ಗೊಟ್ಟಿಕೆರೆ ಕಾಂತರಾಜು, ಬಸವರಾಜು ಅರಳಿಕೆರೆ, ಬೈರಪ್ಪ, ಶಿವನಂಜಪ್ಪ ಮತ್ತಿತರದಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy