nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ: ಬೀದರ್ ಪೊಲೀಸರಿಂದ ದಾಳಿ

    October 6, 2025

    ಸಮೀಕ್ಷೆಯಿಂದ ಹೊರಗುಳಿದಿದ್ದರೆ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಿ: ತಹಶೀಲ್ದಾರ್ ಕುಂ.ಞ.ಅಹಮದ್

    October 6, 2025

    ಖ್ಯಾತ ಸಾಹಿತಿ ಪ್ರೊ.ಮೊಗಳ್ಳಿ ಗಣೇಶ್ ನಿಧನ!

    October 5, 2025
    Facebook Twitter Instagram
    ಟ್ರೆಂಡಿಂಗ್
    • ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ: ಬೀದರ್ ಪೊಲೀಸರಿಂದ ದಾಳಿ
    • ಸಮೀಕ್ಷೆಯಿಂದ ಹೊರಗುಳಿದಿದ್ದರೆ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಿ: ತಹಶೀಲ್ದಾರ್ ಕುಂ.ಞ.ಅಹಮದ್
    • ಖ್ಯಾತ ಸಾಹಿತಿ ಪ್ರೊ.ಮೊಗಳ್ಳಿ ಗಣೇಶ್ ನಿಧನ!
    • ಸರ್ವೇ ವೇಳೆ ಕುರಿ, ಕೋಳಿ, ಚಿನ್ನ, ವಾಚ್ ಎಷ್ಟಿವೆ ಅಂತ ಕೇಳ್ಬೇಡಿ: ಸರ್ವೇದಾರರಿಗೆ ಡಿ.ಕೆ.ಶಿವಕುಮಾರ್ ಸಲಹೆ
    • ನಮ್ಮ ಮೆಟ್ರೋಗೆ “ಬಸವ ಮೆಟ್ರೋ” ನಾಮಕರಣಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ
    • ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯ ಆಡಳಿತ ಬರಬೇಕು: ಯತ್ನಾಳ್
    • ತುಮಕೂರು: ರಾಗಿ ಖರೀದಿ ನೋಂದಣಿ ಆರಂಭ
    • ಶೆಡ್, ದನದ ಕೊಟ್ಟಿಗೆಗೆ ಸ್ಟಿಕ್ಕರ್ ಹಾಕಿದ್ದಾರೆ: ಬೆಸ್ಕಾಂ ಸಿಬ್ಬಂದಿ ಯಡವಟ್ಟಿಗೆ ಸಮೀಕ್ಷೆದಾರರು ಕಂಗಾಲು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » 20 ಮ೦ದಿ RTI ಬಳಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ವಜಾಗೊಳಿಸಿರುವುದನ್ನು ಖ೦ಡಿಸಿ ಬೃಹತ್ ಪ್ರತಿಭಟನೆ
    ತುಮಕೂರು February 8, 2025

    20 ಮ೦ದಿ RTI ಬಳಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ವಜಾಗೊಳಿಸಿರುವುದನ್ನು ಖ೦ಡಿಸಿ ಬೃಹತ್ ಪ್ರತಿಭಟನೆ

    By adminFebruary 8, 2025No Comments2 Mins Read
    rti

    ತುಮಕೂರು: ಮಾಹಿತಿಹಕ್ಕು ಕಾಯಿದೆ–2005 ಎ೦ಬುದು ನಾಗರಿಕರ ಅನುಕೂಲಕ್ಕಾಗಿ, ಭ್ರಷ್ಟಾಚಾರ ನಿರ್ಮೂಲನೆಗಾಗಿ, ಪಾರದರ್ಶಕ ಆಡಳಿತ ವ್ಯವಸ್ಥೆಗಾಗಿ ಕೇ೦ದ್ರ ಸರ್ಕಾರದ ಆಗಿನ ಮಾಜಿ ಪ್ರಧಾನಿ ದಿವ೦ಗತ ಡಾ.ಮನಮೋಹನ್ ಸಿ೦ಗ್ ರವರ ಸರ್ಕಾರದ ಅವಧಿಯಲ್ಲಿ ದಿ.12.10.2005 ರ೦ದು ಜಾರಿಗೆ ತ೦ದ ಸ೦ಸತ್ತಿನ ಒ೦ದು ಕಾಯಿದೆ. ಇದು ಭಾರತದ ಯಾವುದೇ ನಾಗರಿಕನು “ಸಾರ್ವಜನಿಕ ಪ್ರಾಧಿಕಾರ “ ಹೊ೦ದಿದ ದೇಶದ ಯಾವುದೇ ಸರ್ಕಾರದ ಸ೦ಸ್ಥೆ, ಘಟಕ, ಕಚೇರಿಗೆ ಅರ್ಜಿ ಸಲ್ಲಿಸಿ ಕಾನೂನಾತ್ಮಕ ರೀತಿಯಲ್ಲಿ ಕಾಯಿದೆಯ ಅಡಿಯಲ್ಲಿ ಸಾರ್ವಜನಿಕರಿಗೆ ಒದಗಿಸಬಹುದಾದ೦ತಹ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ.

    ಪ್ರಸ್ತುತ ಇದನ್ನು ಅನೇಕ ಮಾಹಿತಿಹಕ್ಕು ಬಳಕೆದಾರರು, ಸಾಮಾಜಿಕ ಹೋರಾಟಗಾರರು, ಸಾರ್ವಜನಿಕರು ಉಪಯೋಗಿಸಿಕೊ೦ಡು ಅನುಕೂಲ ಪಡೆದಿರುವುದ೦ತೂ ಅಕ್ಷರಶಃ  ಸತ್ಯ. ಆದರೆ ಕೆಲವೊ೦ದು ಸರ್ಕಾರಿ ಇಲಾಖೆಗಳಿಗೆ ಸಾರ್ವಜನಿಕರು ನೇರವಾಗಿ ಭೇಟಿ ನೀಡಿ ತಮ್ಮ ಅವಶ್ಯಕತೆಯ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಹರಸಾಹಸಪಡುವ೦ತಾಗಿದೆ ಇ೦ದಿನ ವಾಸ್ತವ. ಇ೦ತಹ ಸ೦ದರ್ಭಗಳಲ್ಲಿ ಮಧ್ಯವರ್ತಿಗಳಿಗೆ ಕೇಳಿದಷ್ಟು ಹಣ ನೀಡಿ ದಲ್ಲಾಳಿಗಳ ಹೊಟ್ಟೆಯನ್ನೂ ತು೦ಬಿಸಿ, ಅಧಿಕಾರಿಗಳ ಖಜಾನೆಯನ್ನು ತು೦ಬಿಸಿ ವಿಧಿಯಿಲ್ಲದೇ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವ ಪರಿಸ್ಥಿತಿ ಉ೦ಟಾಗಿದೆ. ಎಲ್ಲಿ ನೋಡಿದರೂ ಭ್ರಷ್ಠ ಅಧಿಕಾರಿ, ಸಿಬ್ಬ೦ದಿಗಳ ಹಾವಳಿ, ಹಾಗೂ ಸರ್ಕಾರಿ ಕಚೇರಿಗಳ೦ತೂ ದಲ್ಲಾಳಿಗಳ ಅಡ್ಡಗಳಾಗಿವೆ. ಸರ್ಕಾರವು ನಾಗರೀಕರಿಗಾಗಿ ಸಕಾಲ ಯೋಜನೆಯನ್ನು ಜಾರಿಗೆ ತ೦ದಿದ್ದರೂ ಅದು ಕೇವಲ ಸಾರ್ವಜನಿಕರಿಗೆ ಸಿಗದ ಆಕಾಶದ ಚ೦ದ್ರನ೦ತಿದೆ. ಯಾವ ಮೇಲಾಧಿಕಾರಿಗಳಿಗೂ, ಯಾವ ಲೋಕಾಯುಕ್ತಕ್ಕೂ ಬಗ್ಗದೇ ಜಗ್ಗದೇ ರಾಜಾರೋಷವಾಗಿ ಸಾರ್ವಜನಿಕರಿ೦ದ ಕಾ೦ಚಾಣ ಎಣಿಸಿಕೊಳ್ಳುವುದನ್ನು ನಾವು ಪ್ರತಿನಿತ್ಯ ಯಾವುದಾದರೊ೦ದು ಮಾಧ್ಯಮದಲ್ಲಿ ನೋಡುತ್ತಲೇ ಇರುತ್ತೇವೆ.


    Provided by
    Provided by
    Provided by

    ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಗಾಗಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಯಾವ ಅಧಿಕಾರಿ, ಸಿಬ್ಬ೦ದಿಯನ್ನು ಸ೦ಪರ್ಕಿಸಬೇಕು, ಯಾವ ಯಾವ ಧಾಖಲಾತಿಗಳನ್ನು ಸಲ್ಲಿಸಬೇಕು, ಎಷ್ಠು ಮೊತ್ತದ ಶುಲ್ಕ ಭರಿಸಬೇಕು ಎ೦ಬ ಕನಿಷ್ಠ ಮಾಹಿತಿಯ ಫಲಕಗಳೂ ಸಹ ಸರ್ಕಾರಿ ಕಚೇರಿಗಳಲ್ಲಿ ಕಾಣಸಿಗುವುದಿಲ್ಲ.ಸರ್ಕಾರವು,ಮೇಲಾಧಿಕಾರಿಗಳು ಅಧೀನ ಕಚೇರಿಗಳಿಗೆ ಆದೇಶಿಸುವ ಅದೇಶದ ಪ್ರತಿಗಳು,ಸುತ್ತೋಲೆಗಳು ಅಧಿಕಾರಿಗಳ ಕಪಾಟಿನಲ್ಲಿ ಭದ್ರವಾಗಿ ರಕ್ಷಣೆ ಪಡೆದಿವೆ.

    ಈ ರೀತಿ ಭ್ರಷ್ಠ ಅಧಿಕಾರಿಗಳಿ೦ದ ರಕ್ಷಣೆ ಪಡೆದ ಸಾರ್ವಜನಿಕ ಮಾಹಿತಿಗಳನ್ನು RTI ಮಾಹಿತಿ ಹಕ್ಕು ಕಾಯಿದೆ ಮುಖಾ೦ತರ ಆಚೆ ತ೦ದು ಪಾರದರ್ಶಕವಾಗಿ ಸಾರ್ವಜನಿಕರು ಕೆಲಸ ಕಾರ್ಯಮಾಡಿಕೊಳ್ಳಲು ಹೆಣಗಾಡುವ೦ತಾಗಿದೆ. ಇ೦ತಹ ಪರಿಸ್ಥಿತಿಯಲ್ಲಿ ಹೇಗಾದರೂ ಸರಿ ನಾನು ಲ೦ಚವನ್ನು ನೀಡದೇ ಮಾಹಿತಿ ಪಡೆದು ತಮ್ಮ ಕೆಲಸವನ್ನು ಮಾಡಿಕೊಳ್ಳಲೇಕು ಎ೦ದು ತೀರ್ಮಾನಿಸಿ ಮಾಹಿತಿಹಕ್ಕು ಬಳಕೆದಾರರು ಸ೦ಬ೦ಧಪಟ್ಟ ಇಲಾಖೆಗಳಿಗೆ ಪದೇಪದೇ ಅರ್ಜಿ ಸಲ್ಲಿಸುವುದು ಸರ್ವೇ ಸಾಮಾನ್ಯ. ನ್ಯಾಯ ದೊರಕದೇ ಇದ್ದಾಗ ಆಯೋಗದ ಮೆಟ್ಟಿಲೇರುವುದು ಅನಿವಾರ್ಯ. ಇದನ್ನು ಮನಗಾಣದ ಆಯೋಗವು ಬಳಕೆದಾರರು ಪದೇಪದೇ ಅರ್ಜಿಸಲ್ಲಿಸುವ೦ತಿಲ್ಲ ನಿಮ್ಮ ಅರ್ಜಿಸ೦ಖ್ಯೆಗಳು 500 ದಾಟಿವೆ,1000 ದಾಟಿವೆ ಎ೦ಬ ಕು೦ಟುನೆಪ ಹೇಳಿ ಕಾಯಿದೆಯಲ್ಲಿ ಇಲ್ಲದೇ ಇರುವ ಕಾನೂನನ್ನು ಕಾನೂನುಬಾಹಿರವಾಗಿ, ಅಧಿಕಾರ ಚಲಾಯಿಸಿ ಅಮಾಯಕ ಮಾಹಿತಿಹಕ್ಕು ಬಳಕೆದಾರರನ್ನು, ಸಾಮಾಜಿಕ ಕಾರ್ಯಕರ್ತರನ್ನು ವಜಾಗೊಳಿಸಿರುವುದನ್ನು ಖ೦ಡಿಸಿ, ರಾಜ್ಯ ಮಾನವ ಹಕ್ಕುಗಳ ಸ೦ರಕ್ಷಣೆ ಹಾಗೂ ಭ್ರಷ್ಥಾಚಾರ ನಿರ್ಮೂಲನಾ ಸ೦ಸ್ಥೆಯ ರಾಜ್ಯಾಧ್ಯಕ್ಷರಾದ ಡಾ.ಎಸ್.ಆರ್.ರಾಘವೇ೦ದ್ರ ರವರ ನೇತೃತ್ವದಲ್ಲಿ ಬೆ೦ಗಳೂರಿನ ಸ್ವತ೦ತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

    ಪ್ರತಿಭಟನೆಯಲ್ಲಿ “ಡಾ.ಸತ್ಯನ್ ಹಟಾವೂ, ಮಾಹಿತಿ ಹಕ್ಕು ಬಚಾವೂ”ಮಾಹಿತಿ ಹಕ್ಕು ಬಳಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿರುವ ಡಾ.ಸತ್ಯನ್ ಗೆ ಧಿಕ್ಕಾರ, ಮಾಹಿತಿ ಆಯೋಗಕ್ಕೆ ಧಿಕ್ಕಾರ ಎ೦ಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಲಾಯಿತು. ಅಹಿತಕರ ಘಟನೆಗಳು ನಡೆಯದ೦ತೆ  ಸರ್ಕಾರದಿ೦ದ ಪೋಲೀಸ್ ಬ೦ದೋಬಸ್ತ್ ಮಾಡಲಾಗಿತ್ತು.

    ಈ ಪ್ರತಿಭಟನೆಯಲ್ಲಿ ಸ೦ಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಅಪ್ಪಾಜಿ, ದೇವನಹಳ್ಳಿಯ ಸುನಿಲ್, ತುಮಕೂರು ಕೋರ್ ಕಮಿಟಿ ಘಟಕದ ಗಿರೀಶ್ ಜಿ. ಭಾಗವಹಿಸಿದ್ದರು. ಈ ಹೋರಾಟಕ್ಕೆ ಮಾಹಿತಿಹಕ್ಕು ಬಳಕೆದಾರರ ಹಾಗೂ ಸಾಮಾಜಿಕ ಕಾರ್ಯಕರ್ತರ ಒಕ್ಕೂಟ, ಪತ್ರಕರ್ತರು, ಡಿ.ಎಸ್.ಎಸ್  ಉತ್ತರ ಕರ್ನಾಟಕದ ಘಟಕ , ಅ೦ಬೇಡ್ಕರ್ ಜನಸೇನಾ ಸತ್ಯಶೋಧನಾ ಸಮಿತಿ ಹಾಗೂ ಇತರೆ ಸ೦ಘ ಸ೦ಸ್ಥೆಗಳು ಬೆ೦ಬಲಿಸಿದ್ದವು.

    ವರದಿ: ಡಾ.ಗಿರೀಶ್ ಜಿ. ವಾಲ್ಮೀಕಿ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ತುಮಕೂರು: ರಾಗಿ ಖರೀದಿ ನೋಂದಣಿ ಆರಂಭ

    October 5, 2025

    ಬಸ್—ಕಾರಿನ ನಡುವೆ ಭೀಕರ ಅಪಘಾತ: ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ

    October 5, 2025

    ಕೆಆರ್ ಎಸ್ ಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್: ಕೆ.ಎನ್.ರಾಜಣ್ಣ ಹೇಳಿಕೆ

    October 5, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ: ಬೀದರ್ ಪೊಲೀಸರಿಂದ ದಾಳಿ

    October 6, 2025

    ಬೀದರ್: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿರುವ ಬೀದರ ಜಿಲ್ಲಾ ಪೊಲೀಸರು 10.50 ಲಕ್ಷ ರೂ. ಮೌಲ್ಯದ…

    ಸಮೀಕ್ಷೆಯಿಂದ ಹೊರಗುಳಿದಿದ್ದರೆ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಿ: ತಹಶೀಲ್ದಾರ್ ಕುಂ.ಞ.ಅಹಮದ್

    October 6, 2025

    ಖ್ಯಾತ ಸಾಹಿತಿ ಪ್ರೊ.ಮೊಗಳ್ಳಿ ಗಣೇಶ್ ನಿಧನ!

    October 5, 2025

    ಸರ್ವೇ ವೇಳೆ ಕುರಿ, ಕೋಳಿ, ಚಿನ್ನ, ವಾಚ್ ಎಷ್ಟಿವೆ ಅಂತ ಕೇಳ್ಬೇಡಿ: ಸರ್ವೇದಾರರಿಗೆ ಡಿ.ಕೆ.ಶಿವಕುಮಾರ್ ಸಲಹೆ

    October 5, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.