ಬೆಳಗಾವಿ: ಪಂಚಮಸಾಲಿಗಳಿಗೆ 2 ಎ ಮೀಸಲಾತಿ ಹಾಗೂ ಎಲ್ಲ ಲಿಂಗಾಯತಿಗಳಿಗೆ ಕೇಂದ್ರ ಒಬಿಸಿಗೆ ಸೇರ್ಪಡೆ ವಿಚಾರ ‘ ಕಳೆದ ಸರ್ಕಾರ ನೀಡಿದ್ದ 2ಡಿ ಮೀಸಲಾತಿ ನಮಗೆ ಸಿಗಲಿಲ್ಲ’ ಎಂದು ಪಂಚಮಸಾಲಿ ಗುರು ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸಿಎಂ ನೇತೃತ್ವದಲ್ಲಿ ನಡೆಯುವ ಸಭೆಗೂ ಮುನ್ನ ಮಾತನಾಡಿದ ಅವರು ‘ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರ ಬಂದ ಮೇಲೆ 2ಎ ಮೀಸಲಾತಿಗಾಗಿ ಮನವಿ ಮಾಡಿದ್ದೆವು, ಬಜೆಟ್ ಅಧಿವೇಶನ ಮುಗಿದ ಮೇಲೆ ಮಾತುಕತೆ ಮಾಡುತ್ತೇನೆ ಎಂದಿದ್ದರು. ಆದರೆ, ಇದುವರೆಗೂ ಯಾವುದೇ ಮಾತುಕತೆ ನಡೆಸಿಲ್ಲ. ಹೀಗಾಗಿ ಬೃಹತ್ ಪ್ರತಿಭಟನೆ ಮಾಡಿದ್ದೇವೆ ಎಂದರು.


