ತುರುವೇಕೆರೆ: ಚುನಾವಣೆಯ ಪೂರ್ವಭಾವಿಯಾಗಿ ಡಿಎಸ್ ಎಸ್ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ದಲಿತರ ಮತಗಳಿಕೆಗಾಗಿ ಹಣ, ಹೆಂಡ, ಮಾಂಸ ಕೊಡುವುದರ ಮೂಲಕ ಮತದಾರರನ್ನು ತಪ್ಪು ದಾರಿಗೆ ಎಳೆಯುತ್ತಿರುವುದು ಖಂಡನೀಯ ಎಂದಿದ್ದಾರೆ.
ನಾವು ನಮ್ಮ ಸಂಘಟನೆಯಿಂದ ಹಲವಾರು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ .ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿರುವುದರಿಂದ ಜನರು ನಿತ್ಯ ತೊಂದರೆ ಆಗಿದೆ ಅದಲ್ಲದೆ 40% ಕಮಿಷನ್ ತೆಗೆದುಕೊಂಡು ಅದನ್ನು ಮತದಾರರಿಗೆ ಹಂಚಿ ಮತದಾರರನ್ನು ಸೆಳೆಯಲು ಇಲ್ಲದ ಪ್ರಯತ್ನಗಳನ್ನು ಕೆಲವು ಪಕ್ಷಗಳು ಮಾಡುತ್ತಿವೆ ಎಂದು ಅವರು ಆರೋಪಿಸಿದರು.
ವಿಶೇಷವಾಗಿ ದಲಿತ ಮತದಾರ ಯಾವುದೇ ಆಮಿಷಕ್ಕೆ ಒಳಗಾಗದೆ ಕಾಂಗ್ರೆಸ್ ಬೆಂಬಲಿಸಿ ಎಂದು ನಾವು ಕೋರುತ್ತೇವೆ. ಡಿಎಸ್ ಎಸ್ ಪದಾಧಿಕಾರಿಗಳಾಗಿ ಸಂಘಟನೆಯ ಸಂಚಾಲಕನಾಗಿ ಕಾಂಗ್ರೆಸ್ಸನ್ನು ಬೆಂಬಲಿಸುತ್ತಿದ್ದು ಅವರ ಗೆಲುವು ನಿಶ್ಚಿತ ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೊಡಗಿಹಳ್ಳಿ ಹನುಮಂತಯ್ಯ ಮಾತನಾಡಿ 12 ದಲಿತ ಸಂಘಟನೆಗಳು ಸೇರಿ ಕಾಂಗ್ರೆಸ್ ನ್ನು ಗೆಲ್ಲಿಸಲು ಕೈಜೋಡಿಸಿ ದಲಿತರ ಕಾಲೋನಿಗಳಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದಂತೆ ಎಚ್ಚರ ವಹಿಸಿ ಎಲ್ಲರಲ್ಲೂ ಮನವಿ ಮಾಡಿದರು.
ಡಿಎಸ್ಎಸ್ ಮುಖಂಡ ಮಲ್ಲೂರು ತಿಮ್ಮೇಶ್ ಮಾತನಾಡಿ ಯಾವುದೇ ಆಮಿಶಕ್ಕೆ ಒಳಗಾಗದೆ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ ಎಂದು ಸಮಾಜದವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಪುಟ್ಟರಾಜು., ತಿಮ್ಮಣ್ಣ, ರಾಮಚಂದ್ರು, ಎಸ್ ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೇಲ್ನಳ್ಳಿ ಮಂಜಯ್ಯ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಟಿ.ಹೆಚ್. ಗುರುದತ್, ಗೋವಿಂದರಾಜು, ಯೋಗೇಶ್, ಶಿವರಾಜು, ಸತೀಶ್ ಕೊಡಗಿಹಳ್ಳಿ, ದಂಡಿನ ಶಿವರ ಲಕ್ಷ್ಮೀಶ ಮುಂತಾದವರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy