ಶಬರಿಮಲೆ ವಾವರ್ ಮಸೀದಿ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಹಿಂದೂಗಳು ವಾವರ್ ಮಸೀದಿಗೆ ಹೋಗದಂತೆ ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ಸಂಚಾಲಕ ಮೋಹನ್ ಗೌಡ ಮನವಿಯನ್ನು ಮಾಡಿದ್ದಾರೆ.
ಈಗಾಗಲೇ ಶಬರಿಮಲೆ ಅಯ್ಯಪ್ಪ ಸ್ವಾಮೀಯ ವ್ರತ ಆರಂಭವಾಗಿದೆ. ನಾವು ಶಬರಿಮಲೆಗೆ ಹೋಗುವಾಗ ಘೋರ ತಪ್ಪನ್ನು ಮಾಡ್ತಿದ್ದೀವಿ.ವಾವರ್ ಮಸೀದಿಗೆ ಹೋಗುವಂತಹ ಕೆಟ್ಟ ಸಂಪ್ರದಾಯ ಇತ್ತೀಚೆಗೆ ಶುರುವಾಗಿದೆ. ಹಿಂದೂಗಳು ಕೋಟಿಗಟ್ಟಲೇ ಹಣವನ್ನು ಆ ಮಸೀದಿಗೆ ಸುರಿಯುತ್ತಿದ್ದಾರೆ.
ವಾವರ್ ಒಬ್ಬ ಬಾಬರ್ ಆಗಿದ್ದ, ಒಬ್ಬ ಮುಸ್ಲಿಂ ಆಗಿದ್ದನು. ಒಬ್ಬ ಕಳ್ಳನನ್ನ ಅಯ್ಯಪ್ಪ ಸ್ವಾಮೀಯ ಸ್ನೇಹಿತ ಎಂದು ಬಿಂಬಿಸಿದ್ದಾರೆ. ಅವನ ಘೋರಿಯನ್ನು ಮಸೀದಿಯನ್ನಾಗಿ ಮಾಡಿದ್ದಾರೆ. ಇದು ಹಿಂದೂ ಧರ್ಮಕ್ಕೆ ಅಯ್ಯಪ್ಪನಿಗೆ ಮಾಡಿದ ಅಪಮಾನವಾಗಿದೆ.
ಹಿಂದೂಗಳ ಮೂರ್ತಿ ಪೂಜೆಯನ್ನು ಒಪ್ಪದ ಒಬ್ಬ ಮುಸ್ಲಿಂ ವಾವರ್, ಹೇಗೆ ಅಯ್ಯಪ್ಪ ಸ್ವಾಮಿ ಭಕ್ತ ಆಗಲು ಸಾಧ್ಯವಿದೆ..? ಯಾವುದೇ ಕಾರಣಕ್ಕೂ ಹಿಂದೂಗಳು ವಾವರ್ ಮಸೀದಿಗೆ ಕಾಣಿಕೆ ನೀಡಬಾರ್ದು.ಶಬರಿಮಲೆಗೆ ಹೋಗಿ ಅಯ್ಯಪ್ಪಸ್ವಾಮಿ ದರ್ಶನ ಮಾತ್ರ ಪಡೆಯಬೇಕು ಎಂದು ಮನವಿ ಮಾಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


