ಮಹಾರಾಷ್ಟ್ರ : ಆರ್ಡರ್ ಮಾಡಿದ ಮಟನ್ ಸೂಪ್ನಲ್ಲಿ ಅನ್ನವನ್ನು ಕಂಡ ಇಬ್ಬರು ಯುವಕರು ವೇಟರ್ನನ್ನು ಹತ್ಯೆ ಮಾಡಿರುವ ಘಟನೆ ಪಿಂಪಲ್ ಸೌದಾಗರ್‌ನ ಸಾಸರವಾಡಿಯಲ್ಲಿ ನಡೆದಿದೆ.
ಮೃತರನ್ನು ಮಂಗೇಶ್ ಸಂಜಯ್ ಪೋಸ್ತೆ(19) ಎಂದು ಗುರುತಿಸಲಾಗಿದೆ. ಆರೋಪಿಗಳಾದ ವಿಜಯರಾಜ್ ವಾಘಿರೆ ಮತ್ತು ಆತನ ಸಹಚರ ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳಿಬ್ಬರು ಹೋಟೆಲ್ ಗೆ ತಿನ್ನಲು ಬಂದಿದ್ದರು. ವಿಜಯರಾಜ್ ಆರ್ಡರ್ ಮಾಡಿದ ಮಟನ್ ಸೂಪ್ನಲ್ಲಿ ಅನ್ನದ ಕಣಗಳಿದ್ದವು. ಇದರಿಂದಾಗಿ ವೇಟರ್ ಮತ್ತು ವಿಜಯರಾಜ್ ನಡುವೆ ತೀವ್ರ ವಾಗ್ವಾದ ನಡೆದಿದೆ.
ಮಂಗೇಶ್ ಜೊತೆ ಉಪಾಹಾರ ಗೃಹದ ಉದ್ಯೋಗಿ ಅಜಿತ್ ಮತ್ತು ಸಚಿನ್ನ್ನು ಮರದ ಕೋಲಿನಿಂದ ಹೊಡೆದಿದ್ದಾರೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಮಂಗೇಶ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy