ನಿನ್ನೆ ಒಂದು ದಿನದಲ್ಲಿ ದೇಶದಲ್ಲಿ ಹೊಸದಾಗಿ 1,67,059 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಭಾರತದ ಒಟ್ಟಾರೆ ಕೋವಿಡ್-19 ಸೋಂಕಿನ ಪ್ರಮಾಣ 4.14 ಕೋಟಿಗೂ ಅಧಿಕ ಸಂಖ್ಯೆಗೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ತಿಳಿಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 1,192 ಜನರು ಕೊರೊನಾದಿಂದ ಮರಣಿಸುವುದರೊಂದಿಗೆ ಒಟ್ಟಾರೆ ಕೋವಿಡ್-19 ಮರಣ ಪ್ರಮಾಣ 4,96,242ಕ್ಕೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 88,209ರಷ್ಟು ಇಳಿಕೆ ಕಂಡಿದ್ದು, 17,43,059ಕ್ಕೆ ತಲುಪಿದೆ.
ಇದು ಒಟ್ಟಾರೆ ಸೋಂಕುಗಳ 4.20 ಪ್ರತಿಶತದಷ್ಟಿದೆ. ದೇಶದಲ್ಲಿ ಸಮಗ್ರ ಚೇತರಿಕೆ ಪ್ರಮಾಣ ಶೇ.94.60ರಷ್ಟಿದೆ ಎಂದು ಸಚಿವಾಲಯ ಹೇಳಿದೆ.ದೈನಿಕ ಪಾಸಿಟಿವಿಟಿ ದರ ಶೇ.11.69ರಷ್ಟು ದಾಖಲಾಗಿದೆ.
ವಾರದ ಪಾಸಿಟಿವಿಟಿ ದರ ಶೇ.15.25ರಷ್ಟಿದೆ. ಕೊವಿಡ್‍ನಿಂದ ಚೇತರಿಸಿಕೊಂಡವರ ಸಂಖ್ಯೆ 3,92,30,198ಕ್ಕೇರಿದೆ. ಕೋವಿಡ್‍ನಿಂದ ಆದ ಸಾವಿನ ಸಂಖ್ಯೆ 1.20 ಪ್ರತಿಶತದಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ 8 ಗಂಟೆಗೆ ತಾಜಾ ಮಾಹಿತಿ ನೀಡಿದೆ.
ಹೊಸ ಪ್ರಕರಣಗಳೊಂದಿಗೆ ಒಟ್ಟಾರೆ ಸೋಂಕಿನ ಪ್ರಮಾಣ 4,14,69,499ಕ್ಕೆ ತಲುಪಿದೆ. ಕೋವಿಡ್ ಲಸಿಕೆ ನೀಡಿಕೆ ಇದುವರೆಗೆ 166.68 ಕೋಟಿ ಡೋಸ್ ದಾಟಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB