ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತೆ ಅಸಮಾಧಾನ ಹೊರ ಹಾಕಿದ್ದಾರೆ.
ಈ ಕುರಿತು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಸಚಿವ ಸ್ಥಾನ ನೀಡಿದರೆ ಪಡೆಯುತ್ತೇನೆ. ಸಂಪು ವಿಸ್ತರಣೆ ಪಕ್ಷದ ಹಿರಿಯರಿಗೆ ಬಿಟ್ಟಿದ್ದು. ಅವರಿಗೆ ಸರಿ ಎನಿಸಿದರೇ ಕ್ಯಾಬಿನೆಟ್ ವಿಸ್ತರಿಸಲಿ ಭೇಡ ಅಂದ್ರೆ ಬೇಡ ಷಡ್ಯಂತ್ರದಿಂದ ನನ್ನನ್ನ ಪ್ರಕರಣದಲ್ಲಿ ಸಿಲುಕಿಸಿದರು ಎಂದರು.
ನಾವು ಎಂದಿಗೂ ಹಿಂದುತ್ವ ಪರ. ಕಡುಬಡವ ಹಿಂದುಗಳಿಗೆ ಮೀಸಲಾತಿ ಸಿಗಬೇಕು. ಶ್ರೀಮಂತರ ಮೀಸಲಾತಿ ರದ್ಧಾಗಬೇಕು. ಎಸ್ ಎಸಿ ಮೀಸಲಾತಿ ಹೆಚ್ಚಿಸಿದ್ದು ಸಂವಿಧಾನಬದ್ಧವಾಗಿದೆಯಾ ಎಂದು ಸಿದ್ಧರಾಮಯ್ಯ ಕೇಳುತ್ತಾರೆ. ಇದನ್ನ ಸರ್ವಪಕ್ಷ ಸಭೆಯಲ್ಲೇ ಕೇಳಬೇಕಿತ್ತು . ಈಗ ಹೊರಗಡೆ ಬಂದು ಗೊಂದಲದ ಹೇಳಿಕೆ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಾಗೆಯೇ ಈಗ ಕುರುಬರಿಗೆ ಎಸ್ ಟಿ ಮೀಸಲಾತಿ ಕೊಡಬೇಕು ಎನ್ನುತ್ತಿದ್ದಾರೆ. ಹಿಂದೆ ಅವರ ಬಾಯಿಗೆ ಏನು ತುಂಬಿಕೊಂಡಿದ್ದರು ಎಂದು ಸಿದ್ಧರಾಮಯ್ಯ ವಿರುದ್ಧ ಕೆ.ಎಸ್ ಈಶ್ವರಪ್ಪ ಗುಡುಗಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


