ಕಾಂತಾರ ಚಿತ್ರದ ‘ವರಾಹ ರೂಪಂ’ಹಾಡು ಯೂಟ್ಯೂಬ್ನಲ್ಲಿ ಪ್ರತ್ಯಕ್ಷವಾಗಿದೆ. ಈ ಹಾಡಿಗೆ ಕೃತಿಚೌರ್ಯದ ಆರೋಪ ಮಾಡಲಾಗಿತ್ತು. ಬಳಿಕ ಹಾಡನ್ನು ಪ್ರಸಾರ ಮಾಡದಂತೆ ಕೇರಳದ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿತ್ತು. ಹಾಗಾಗಿ ಯೂಟ್ಯೂಬ್, ಮ್ಯೂಸಿಕ್ ಆ್ಯಪ್ಗಳಾದ ಸಾವನ್ ಮೊದಲಾದ ಪ್ಲಾಟ್ಫಾರ್ಮ್ಗಳಿಂದ ಈ ಹಾಡನ್ನು ಡಿಲಿಟ್ ಮಾಡಲಾಗಿತ್ತು. ವರಾಹ ರೂಪಂ ಹಾಡು ಕಾನೂನು ಹೋರಾಟದಲ್ಲಿ ಕಾಂತಾರ ಚಿತ್ರಕ್ಕೆ ಗೆಲುವು ಸಿಕ್ಕಿದೆ.
ವರಾಹ ರೂಪಂ ಹಾಡಿನ ಕುರಿತು ಕೇರಳದ ಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಆ ಹಾಡು ಇಂದಿನಿಂದ ಚಿತ್ರಮಂದಿರ, ಯೂಟ್ಯೂಬ್, ಓಟಿಟಿ ಸೇರಿದಂತೆ ಎಲ್ಲೆಡೆ ಲಭ್ಯವಿದೆ.
ಇದಕ್ಕೂ ಮುನ್ನ ’ ಹಾಡನ್ನು ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್ಫಾರ್ಮ್ಗಳಲ್ಲಿ ಒಪ್ಪಿಗೆ ಇಲ್ಲದೆ ಬಳಸಬಾರದು ಎಂದು ಕೇರಳದ ಕೋರ್ಟ್ ಆದೇಶ ಹೊರಡಿಸಿತ್ತು. ಚಿತ್ರತಂಡವು ‘ವರಾಹ ರೂಪಂ’ ಹಾಡನ್ನು ಚಿತ್ರಮಂದಿರ, ಯೂಟ್ಯೂಬ್ನ ಹೊಂಬಾಳೆ ಫಿಲಂಸ್ನ ಚಾನಲ್, ಮ್ಯೂಸಿಕ್ ಆ್ಯಪ್ಗಳಾದ ಸಾವನ್ ಮುಂತಾದ ಕಡೆಗಳಿಂದ ಡಿಲಿಟ್ ಮಾಡಿತ್ತು.
ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಡಿ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿದ್ದು, ರಿಷಬ್ ಶೆಟ್ಟಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy