ಮುಂಬೈ: ಭಾರತ ಕ್ರಿಕೆಟ್ ನ ಜೀವಂತ ದಂತಕಥೆ ಎಂದೇ ಖ್ಯಾತಿ ಪಡೆದಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೊಲ್ಕರ್ ಅವರು ವಿಜಯ ದಶಮಿಯ ಪ್ರಯುಕ್ತ ಇಂದು( ಮಂಗಳವಾರ ) ಶುಭಾಶಯ ಕೋರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.. ಎಂದು ಹೇಳಿದ್ದಾರೆ.
ಚೆಂಡು ಬೌಂಡರಿಯನ್ನು ದಾಟಿದಂತೆ, ಕೆಟ್ಟದ್ದರ ಮೇಲೆ ಒಳ್ಳೆಯದು ವಿಜಯ ಸಾಧಿಸಲಿ. ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳು ನಿವಾರಣೆಯಾಗಲಿ, ಸರಿಯಾದ ಕಾರಣಕ್ಕೆ ಮತ್ತು ಉತ್ತಮ ವಿಷಯಗಳ ಪರ ಬ್ಯಾಟಿಂಗ್ ಮುಂದುವರಿಸಿ ಎಂದು ಬರೆದುಕೊಂಡಿದ್ದಾರೆ.


