ಗುಜರಾತ್ ನ ಭಾವ್ ನಗರ ಜಿಲ್ಲೆಯ ಪಾಲಿತಾನಾ ಪಟ್ಟಣದಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ. ಮಾಂಸ ಮಾರಾಟ, ಮಾಂಸ ಮಾರಾಟ ಕುರಿತು ಬೋರ್ಡ್ ಅಳವಡಿಸುವುದು, ಮಾಂಸ ಸೇವಿಸುವುದನ್ನು ಈ ಪಟ್ಟಣದಲ್ಲಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಜಗತ್ತಿನಲ್ಲೇ ಮಾಂಸಾಹಾರವನ್ನು ನಿಷೇಧಿಸಿದ ಮೊದಲ ಪಟ್ಟಣ ಅಥವಾ ನಗರ ಎಂಬ ಖ್ಯಾತಿಗೆ ಪಾಲಿತಾನಾ ಪಾತ್ರವಾಗಿದೆ. ಗುಜರಾತ್‌ನ ಪಾಲಿತಾನಾ ಪಟ್ಟಣವು ಜೈನ ದೇವಾಲಯಗಳಿಗೆ ಹೆಸರಾಗಿದೆ. ಶತ್ರುಂಜಯ ಗುಡ್ಡಗಾಡು ಪ್ರದೇಶಗಳಲ್ಲಿರುವ ನಗರವು ಜೈನ ದೇವಾಲಯಗಳ ನಗರ ಎಂದೇ ಖ್ಯಾತಿಯಾಗಿದೆ. ಈ ಪಟ್ಟಣದಲ್ಲಿ ಸುಮಾರು 800 ದೇವಾಲಯಗಳಿವೆ. ತುಂಬ ಖ್ಯಾತಿ ಪಡೆದಿರುವ ಆದಿನಾಥ ದೇವಾಲಯವೂ ಇದೆ. ಜೈನರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಜೈನರು ಹಾಗೂ ಜೈನ ಸನ್ಯಾಸಿಗಳಿಗೆ ಹೆಸರುವಾಸಿಯಾಗಿರುವ ಪಟ್ಟಣದಲ್ಲಿ ಸುಮಾರು 250 ಮಾಂಸದಂಗಡಿಗಳಿವೆ ಎಂಬುದಾಗಿ 200 ಜೈನ ಸನ್ಯಾಸಿಗಳು ಪ್ರತಿಭಟನೆ ನಡೆಸಿದ್ದರು. ಪವಿತ್ರ ಯಾತ್ರಾ ಸ್ಥಳಗಳಲ್ಲಿ ಮಾಂಸ ಮಾರಾಟ ನಿಷೇಧಿಸಬೇಕು ಎಂಬುದಾಗಿ ಅವರು ಪಟ್ಟು ಹಿಡಿದಿದ್ದರು. ಹಾಗಾಗಿ, ಪಟ್ಟಣದಲ್ಲಿ ಮಾಂಸ ಮಾರಾಟ, ಸೇವನೆಯನ್ನು ಕಾನೂನುಬಾಹಿರ ಎಂಬುದಾಗಿ ಘೋಷಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA