ಮೆದುಳು ಜ್ವರ ತಡೆಗೆ ರಾಜ್ಯದಲ್ಲಿ ಜೆಇ ಲಸಿಕೆಯನ್ನು ನೀಡುತ್ತಿದ್ದು, ಮಧುಗಿರಿಯಲ್ಲಿ ಇದನ್ನು ಪಡೆದ 10 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಟ್ಟಣದ ಎಂಜಿಎಂ ಬಾಲಕಿಯರ ಪ್ರೌಢ ಶಾಲೆಯ ಮಕ್ಕಳು ಅಸ್ವಸ್ಥಗೊಂಡಿದ್ದು ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಶಾಸಕ ಎಂ.ವಿ.ವೀರಭದ್ರಯ್ಯ ಆಸ್ಪತ್ರೆಗೆ ಮಕ್ಕಳ ಆರೋಗ್ಯ ವಿಚಾರಿಸಿದರು.
ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಲಸಿಕೆ ಅಭಿಯಾನದ ಆರ್‌ಸಿಎಚ್‌ಡಿ ಕೇಶವರಾವ್, ಟಿಎಚ್‌ಒ ಡಾ.ರಮೇಶ್‌ಬಾಬು, ವೈದ್ಯಾಧಿಕಾರಿ ಸಂತೋಷ್ ಸಿಂಗ್, ಬಿಇಒ ಕೃಷ್ಣಪ್ಪ, ಬಿಆರ್‌ಸಿ ಹನುಮಂತರಾಯಪ್ಪ, ಶಾಲಾ ಸಮಿತಿ ಕಾರ್ಯದರ್ಶಿ ಶಂಕರನಾರಾಯಣ್, ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ಹಾಗೂ ಇತರರು ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy