ಸರಗೂರು: ತಾಲ್ಲೂಕಿನ ನಾಯಕ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಹಾಗೂ ಆದಿಜಾಂಭವ ಸಮಿತಿ ಆದಿವಾಸಿ ಬುಡಕಟ್ಟು, ಗಿರಿಜನ ಪ್ರಗತಿಪರ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಪರಮ ಪೂಜ್ಯ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರ ಹೋರಾಟಕ್ಕೆ ಬೆಂಬಲ ನೀಡಲು ಕರೆ ನೀಡಲಾಯಿತು.
ತಾಲ್ಲೂಕಿನ ನಾಮಧಾರಿಗೌಡನ ಕಲ್ಯಾಣ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಪುರದಕಟ್ಟೆ ಬಸವರಾಜು, ಪರಮ ಪೂಜ್ಯ ಶ್ರೀ ಪ್ರಸನಾನಂದ ಸ್ವಾಮೀಜಿ ನಮ್ಮ ಜನಾಂಗಕ್ಕೆ ಸಂವಿಧಾನ ಬದ್ಧವಾಗಿ ಸರ್ಕಾರ ನೀಡಬೇಕಾಗಿರುವ ಪರಿಶಿಷ್ಟ ಪಂಗಡ 7.5ರಷ್ಟು ಮತ್ತು ಪರಿಶಿಷ್ಟ ಜಾತಿ 17ರಷ್ಟು ಮೀಸಲಾತಿ ಹೆಚ್ಚಳಕ್ಕಾಗಿ ಸುಮಾರು 95 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸತ್ಯಗ್ರಹ ಧರಣಿ ಕುಳಿತಿದ್ದಾರೆ. ಆದರೆ ಈವರೆಗೆ ನ್ಯಾಯ ದೊರಕದೇ ಇರುವುದು ನೋವಿನ ಸಂಗತಿ ಎಂದರು.
ಪಟ್ಟಣ ಪಂಚಾಯತ್ ಸದಸ್ಯ ಹಾಗೂ ನಾಯಕ ಸಮಾಜದ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಮಾತನಾಡಿ, ಪರಮ ಪೂಜ್ಯ ಶ್ರೀ ಪ್ರಸನಾನಂದ ಸ್ವಾಮೀಜಿಗೆ ಬೆಂಬಲ ಸೂಚಿಸಿ ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲು ಕರೆ ನೀಡಲಾಗಿದೆ. ಅದ್ದರಿಂದ ಸರಗೂರು ತಾಲ್ಲೂಕಿನಲ್ಲಿ ಮೇ 20ರಂದು ಪ್ರತಿಭಟನೆ ನಡೆಯಲಿದ್ದು, ಅಂದು ಬೆಳಿಗ್ಗೆ 11 ಗಂಟೆಗೆ ಜಯಚಾಮರಾಜೇಂದ್ರ ಕ್ರೀಡಾಂಗಣದಿಂದ ಹೊರಟು ತಾಲ್ಲೂಕು ಕಚೇರಿಯವರೆಗೂ ಶಾಂತಿಯುತವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.
ಅಂಕನಾಯಕ ಅಗತ್ತೂರು.ಸಂವಿಧಾನ ಸಂರಕ್ಷಣಾ ಸಮಿತಿ ಉಪಾಧ್ಯಕ್ಷ ಹಾಗೂ ನಾಯಕ ಸಮಾಜ ಸಂಘ ನಿರ್ದೇಶಕರ ಸಾಗರೆ ಶಂಕರ್ ಮಾತನಾಡಿ, ಎಲ್ಲಾ ಊರಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಬಂಧುಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಯಜಮಾನರುಗಳು, ಸಂಘ ಸಂಸ್ಥೆಗಳು, ಪದಾಧಿಕಾರಿಗಳು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರುಗಳು, ಪಪಂ ಸದಸ್ಯರು, ಮುಖಂಡರು, ವಾಲ್ಮೀಕಿ ಸಂಘದವರು, ದಲಿತ ಸಂಘರ್ಷ ಸಮಿತಿ, ಸಂವಿಧಾನ ಸಂರಕ್ಷಣಾ ಸಮಿತಿ, ಆದಿಜಾಂಭವ ಮತ್ತು ಆದಿವಾಸಿ ಬುಡಕಟ್ಟು ಜನಾಂಗದ ಸಮಿತಿಯ ಸದಸ್ಯರು ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ನಾಯಕ ಜನಾಂಗ ಸಂಘದ ಅಧ್ಯಕ್ಷ ಪುರದಕಟ್ಟೆ ಬಸವರಾಜು, ಹೆಚ್ ಡಿ ಕೋಟೆ ಮತ್ತು ಸರಗೂರು ಮಾಜಿ ಅಧ್ಯಕ್ಷ ಶಂಭುಲಿಂಗನಾಯಕ, ಗೌರವಾಧ್ಯಕ್ಷ ಬಸವನಾಯಕ, ಪಪಂ ಸದಸ್ಯ ಮತ್ತು ನಾಯಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ, ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಸರಗೂರು ಶಿವಣ್ಣ, ಕಾರ್ಯದರ್ಶಿ ಇಟ್ನ ಸಿದ್ದರಾಜು, ಸಂಘಟನಾ ಕಾರ್ಯದರ್ಶಿ ಬೆಟ್ಟನಾಯಕ, ಖಜಾಂಚಿ ನಾಗನಾಯಕ, ಸಂವಿಧಾನ ಸಂರಕ್ಷಣಾ ಸಮಿತಿ ಉಪಾಧ್ಯಕ್ಷ ಮತ್ತು ನಿರ್ದೇಶಕ ಸಾಗರೆ ಶಂಕರ್, ಸಂವಿಧಾನ ಸಂರಕ್ಷಣಾ ಸಮಿತಿ ಪ್ರದಾನ ಕಾರ್ಯದರ್ಶಿ ಗ್ರಾ.ಪಂ. ಸದಸ್ಯ ಬೆಟ್ಟಸ್ವಾಮಿ, ಅಂಕನಾಯಕ ಅಗತ್ತೂರು, ಮುಳ್ಳೂರು ಸಿದ್ದರಾಜು, ರವಿಬಸಪುರ, ಕುಮಾರ್ ಹಲಸೂರು, ಸತ್ಯರಾಜ್ ಚಾಮೇಗೌಡನಹುಂಡಿ ಇದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5