ಈ ದೇಶವು ಒಂದು ವಿಚಿತ್ರ ಸಂಪ್ರದಾಯವನ್ನು ಹೊಂದಿದೆ. ಈ ದೇಶದಲ್ಲಿ ಪುರುಷರು ಎರಡು ಬಾರಿ ಮದುವೆಯಾಗಬೇಕು. ಇಷ್ಟು ಮಾತ್ರವಲ್ಲದೆ, ಹಾಗೆ ಮಾಡಲು ನಿರಾಕರಿಸುವವರಿಗೆ ಶಿಕ್ಷೆ ಸಹ ಆಗುತ್ತೆ. ಭಾರತದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ, ಒಬ್ಬ ಪುರುಷನು ಒಂದು ಮದುವೆಯಾದ ನಂತರ ಇನ್ನೊಬ್ಬರನ್ನು ಮದುವೆಯಾದರೆ, ಅವನಿಗೆ ಶಿಕ್ಷೆಯಾಗುತ್ತದೆ. ಆದರೆ ಈ ದೇಶದಲ್ಲಿ ಪುರುಷರು ಬಲವಂತವಾಗಿ ಮರುಮದುವೆಯಾಗುತ್ತಾರೆ.
ಆಫ್ರಿಕನ್ ದೇಶವಾದ ಎರಿಟ್ರಿಯಾದಲ್ಲಿ, ಎಲ್ಲಾ ಪುರುಷರು ಎರಡು ಬಾರಿ ಮದುವೆಯಾಗುವಂತೆ ಕಡ್ಡಾಯಗೊಳಿಸಲಾಗಿದೆ. ಇಲ್ಲದಿದ್ದಲ್ಲಿ ಜೈಲು ಪಾಲಾಗಬಹುದು. ಇದಕ್ಕಾಗಿ ಇಲ್ಲಿನ ಸರ್ಕಾರ ಕಾನೂನು ಕೂಡ ಮಾಡಿದೆ. ಇದನ್ನು ತಡೆಯಲು ಪ್ರಯತ್ನಿಸುವವರಿಗೆ ಸಹ ಜೀವಾವಧಿ ಶಿಕ್ಷೆ ವಿಧಿಸಬಹುದು. ಇನ್ನು ಮೊದಲ ಹೆಂಡತಿ ಎರಡನೇ ಮದುವೆಗೆ ವಿರೋಧಿಸಿದರೆ ಅವಳಿಗೂ ಶಿಕ್ಷೆಯಾಗುತ್ತದೆ.
ಎರಿಟ್ರಿಯಾದಲ್ಲಿ ಪುರುಷರ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಈ ವಿಚಿತ್ರ ಕಾನೂನನ್ನು ಜಾರಿಗೊಳಿಸಲಾಗಿದೆ. ಆದ್ರೆ ಇಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಎರಡು ಪಟ್ಟು ಹೆಚ್ಚು. ಅದಕ್ಕಾಗಿಯೇ ಇಲ್ಲಿ ಪುರುಷರನ್ನು ಎರಡು ಬಾರಿ ಮದುವೆಯಾಗಲು ಒತ್ತಾಯಿಸಲಾಗುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA