ಹೊಳೆನರಸೀಪುರ: ತಾಲೂಕಿನ ಶ್ರವಣೂರು ಗ್ರಾಮದಲ್ಲಿ ಗ್ರಾಮದ ಕೆರೆ ಹಾಗೂ ಅರಣ್ಯ ಸಮೀಪ ಇರುವ ಸರ್ಕಾರಿ ಜಾಗದಲ್ಲಿ ಸ್ಥಳೀಯ ವ್ಯಕ್ತಿಗಳಿಗೆ ಸೇರಿದ ಹಸು ಹಾಗೂ ಮೇಕೆಯನ್ನು ಚಿರತೆ ಕೊಂದು ಹಾಕಿದ ಘಟನೆ ನಡೆದಿದೆ
ಪುಟ್ಟಸಾಮಿನಾಯಕ ಎಂಬುವರಿಗೆ ಸೇರಿರುವ ಹಸು ಮತ್ತು ಲೋಕೇಶ್ ಎಂಬುವರಿಗೆ ಸೇರಿರುವ ಮೇಕೆ ಮೇಯುತ್ತಿದ್ದ ವೇಳೆ ಚಿರತೆ ದಾಳಿ ಮಾಡಿದ್ದು, ಮೇಕೆ ಹಾಗೂ ಹಸು ಎರಡೂ ಸಾವನ್ನಪ್ಪಿವೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡರು. ಗ್ರಾಮಸ್ಥರು ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರು.
ವರದಿ: ಮಂಜು, ಶ್ರವಣೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


