ಅಯೋಧ್ಯೆಯಲ್ಲಿ ನಡೆಯುತ್ತಿರೋ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಸಚಿವ ಕೆ.ಎನ್. ರಾಜಣ್ಣ ಕುಟುಂಬದಿಂದ ರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಧುಗಿರಿ ತಾಲೂಕಿನ ಕಿತ್ತಗಳ್ಳಿ ಗ್ರಾಮದಲ್ಲಿ ಕೆ.ಎನ್. ರಾಜಣ್ಣ ಕುಟುಂಬದಿಂದ ಪೂಜೆ ಸಲ್ಲಿಸಲಾಯಿತು. ಕಿತ್ತಗಳ್ಳಿ ಗ್ರಾಮದಲ್ಲಿ ಇರುವ ರಾಮ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಹೋಮ ನಡೆಸಿ ಪೂಜೆ ಸಲ್ಲಿಸುತ್ತಿರುವ ಕುಟುಂಬದವರು ವಿಧಿ ವಿಧಾನದಂತೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಹೋಮದಲ್ಲಿ ಪಾಲ್ಗೊಂಡ ಸಚಿವ ಕೆ.ಎನ್. ರಾಜಣ್ಣ ಪತ್ನಿ ಶಾಂತಲ ಹಾಗೂ ಸಂಬಂಧಿಕರು, ಕೆ.ಎನ್. ರಾಜಣ್ಣ ನಿರ್ಮಾಣ ಮಾಡಿರುವ ದೇವಸ್ಥಾನವಾಗಿದ್ದು 2006ರಲ್ಲಿ ನಿರ್ಮಿಸಲಾಗಿದೆ.
ಪಾಳು ಬಿದ್ದಿದ್ದ ದೇವಸ್ಥಾನವನ್ನು ಕೆ.ಎನ್ ರಾಜಣ್ಣ ಜೀರ್ಣೋದ್ಧಾರ ಮಾಡಿದ್ದಾರೆ. ಅಂದಾಜು 20 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ದೇವಸ್ಥಾನದಾಲ್ಲಿ ಇಂದು ವಿಶೇಷ ಪೂಜಾ ಕಾರ್ಯಕ್ರಮಗಳು ಮುಂಜಾನೆಯಿಂದಲೂ ನೆರವೇರುತ್ತಿವೆ. ಇಂದು ಅಯೋಧ್ಯೆ ದೇವಸ್ಥಾನದ ಉದ್ಘಾಟನೆಯ ಸಮಯಕ್ಕೆ ಸರಿಯಾಗಿ ಪೂಜೆ ಸಲ್ಲಿಕೆ ಮಾಡಲಾಗುವುದು.


