ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೆಸರನ್ನು ದುರುಪಯೋಗ ಮಾಡಿಕೊಂಡು ಲೆಟರ್ ಹೆಡ್ ಅನ್ನು ನಕಲು ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾರುತಿ ಬಂಧಿತ ಆರೋಪಿಯಾಗಿದ್ದಾನೆ. ಡಾ.ಜಿ.ಪರಮೇಶ್ವರ್ ರವರ ಹೆಸರನ್ನು ಮತ್ತು ಗೃಹ ಖಾತೆಯ ಹೆಸರಿನ ಲೆಟರ್ ಹೆಡ್ ಅನ್ನು ತನಗೆ ಬೇಕಾದ ರೀತಿಯಲ್ಲಿ ಲ್ಯಾಪ್ ಟ್ಯಾಪ್ ನಲ್ಲಿ ಎಡಿಟ್ ಮಾಡಿಕೊಂಡು ಅಕ್ರಮ ಹಣ ಸಂಪಾದನೆ ಮಾಡುವ ಉದ್ದೇಶ ಹೊಂದಿದ್ದನು.
ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ತಾನು ಸೃಷ್ಟಿ ಮಾಡಿರುವ ಸಚಿವರ ಲೆಟರ್ಹೆಡ್ ಅನ್ನು ನೀಡಿ ಭಕ್ತಾಧಿಗಳಿಂದ ಸುಮಾರು 6,000/– ರೂ. ನಿಂದ 10,000/- ರೂ. ನಂತೆ ವಸೂಲಿ ಮಾಡುತ್ತಿದ್ದನು.
ನಂತರ ಆಂಧ್ರಪ್ರದೇಶ್ ರಾಜ್ಯದ ಮುಖ್ಯಮಂತ್ರಿಗಳ ಕಛೇರಿ ಕರೆ ಮಾಡಿ ತನಗೆ ಬೇಕಾದ ಫ್ಯಾಮಿಲಿ ಮೆಂಬರ್ ಐಡಿ ದೇವಸ್ಥಾನಕ್ಕೆ ಬರುತ್ತಾರೆ. ಅವರಿಗೆ ದೇವರ ದರ್ಶನಕ್ಕೆ ಅನುವುಮಾಡಿಕೊಡಿ ಇಲ್ಲವಾದಲ್ಲಿ ನಿಮ್ಮನ್ನು ಅಮಾನತ್ತುಪಡಿಸುವುದಾಗಿ ಬೆದರಿಸುತ್ತಿದ್ದನು. ಸೃಷ್ಟಿ ಮಾಡಿರುವ ಲೆಟರ್ ಹೆಡ್ ಅನ್ನು ಆಂಧ್ರ ಸಿ ಎಂ ಕಛೇರಿ ಸಿಬ್ಬಂದಿಗೆ ವಾಟ್ಸ್ ಆಪ್ ಮಾಡುತ್ತಿದ್ದನು. ಗೃಹ ಸಚಿವ ಡಾ.ಜಿ. ಪರಮೇಶ್ವರ್ ರವರ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ಮಾಡಿರುತ್ತಾನೆಂದು ಗೃಹಮಂತ್ರಿಗಳ ವಿಶೇಷ ಅಧಿಕಾರಿ ಕೆ ನಾಗಣ್ಣ ತುಮಕೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಮೊ.ನಂ. 480/2024 ಕಲಂ 318(3), 318)4), 336(1), 336(3), 340, 308(4),308(7) 3(5) 29 wNo was dee’s Book wover Adg. ಪ್ರಕರಣ ದಾಖಲಾಗಿದೆ.
ಆರೋಪಿ ಪತ್ತೆ ಕಾರ್ಯ ಕೈಗೊಂಡ ಪೊಲೀಸರು, ಆರೋಪಿ ಮಾರುತಿಯನ್ನು ಸಿವಿಲ್ ಕಂಟ್ರಾಕ್ಟರ್ ಸೆಂಚೂರಿ ಕಮಾಂಡರ್ ವಿಸ್ತಾರ್ ರಮಣಶ್ರೀ ಕ್ಯಾಅಪೋರ್ನಿಯ ಹತ್ತಿರ, ಹನುಮಂತಪುರ ಯಲಹಂಕ ನ್ಯೂಟೌನ್ ಬೆಂಗಳೂರು ಇಲ್ಲಿ ಬಂಧಿಸಿದ್ದಾರೆ. ಯಲಹಂಕದ ಆರೋಪಿಯ ಮನೆಯ ಬಳಿ ವಶಕ್ಕೆ ಪಡೆದು ಠಾಣೆಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಂತರ ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx