ಕರ್ನಾಟಕ ಸರ್ಕಾರ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷ ತನ್ನ ಕಡೆಯ ಮೀಸಲಾತಿ ಅಸ್ತ್ರ ಬಳಿಸಿದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಚಿವ ಸಂಪುಟ ಸಭೆ ಮೀಸಲಾತಿಯ ಬದಲಾವಣೆ ಮಾಡಿದ್ದು ಇಲ್ಲಿ ಎಲ್ಲಾ ವರ್ಗಗಳಿಗೆ ಅನ್ವಯಿಸುವ ಹಾಗೆ ಈ ಬದಲಾವಣೆಯನ್ನು ತರಲಾಗಿದೆ ಎಂದು ಸರ್ಕಾರ ಸಮರ್ಥನೆ ನೀಡುತ್ತಾ ಇದೆ .
ಯಾವ ಬದಲಾವಣೆಯನ್ನು ಸಂಪುಟ ಸಭೆಯಲ್ಲಿ ತೀರ್ಮಾನಗೊಳ್ಳಲಾಗಿದೆ ಅಂದರೆ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣಾ ನೀತಿ ಸಂಹಿತಿ ಘೋಷಣೆ ಆಗಲಿದ್ದು ಅದರ ಮುಂಚೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಅತ್ಯಂತ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ಬಹುದಿನಗಳಿಂದ ನಿರೀಕ್ಷಿತ ಗೊಂಡಿರುವ ದಲಿತ ಒಳ ಮೀಸಲಾತಿಗಳ ಕುರಿತು ಬೇಡಿಕೆ ಇತ್ತು 3ರಿಂದ 7 % ಹೆಚ್ಚಿಸಿ ಇದರಿಂದ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ 50% ಗಿಂತ ಗರಿಷ್ಠ ಮಿತಿಯನ್ನು ದಾಟಿ 56% ಹೋಗಿದ್ದು ರಿಂದ ಇದು ಚರ್ಚೆಗೆ ಗ್ರಾಹಕವಾಗಿತ್ತು .
2018 ರಲ್ಲಿ ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಲಿಂಗಾಯತ ಧರ್ಮವನ್ನು ಒಡೆಯಲು ಪ್ರಯತ್ನ ಪಟ್ಟರು ಪ್ರಯತ್ನ ಸಫಲವಾಗಲಿಲ್ಲ ಆದ್ದರಿಂದ ಪಂಚಮಸಾಲಿಗಳ 15% ರಷ್ಟು ಮೀಸಲಾತಿ 2 ಎ ಸೇರಿಸಬೇಕೆಂಬ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ಪ್ರಾರಂಭಿಸಿದರು ಬೇಡಿಕೆಯ ಆಧಾರದ ಮೇಲೆ ಸರ್ಕಾರ ಇದರಲ್ಲಿ 3 ಬಿ ವರ್ಗವನ್ನು ರದ್ದುಪಡಿಸಿ ಸಮುದಾಯಕ್ಕೆ ಪ್ರತ್ಯೇಕ 3D ಎಂಬ ಹೊಸ ಪ್ರವರ್ಗವನ್ನು ಸೃಷ್ಟಿ ಮಾಡಿತು. ಇದರಿಂದ 5% ರಿಂದ 7%ಕ್ಕೆ ಏರಿಸಿ ಸಮಸ್ತ ಲಿಂಗಾಯತ ಸಮುದಾಯಕ್ಕೆ ಅನುಕೂಲವಾಗುವಂತೆ ಬದಲಾವಣೆ ಮಾಡಲಾಗಿದೆ.
ಮತ್ತೊಂದು ಕಡೆ ಅಲ್ಪಸಂಖ್ಯಾತರ ಹಾಗೂ ಧರ್ಮದ ಹೆಸರಿನಲ್ಲಿ ಮೀಸಲಾತಿ ನೀಡಲಾಗದು ಎಂದು ಮುಸ್ಲಿ ಸಮುದಾಯ ಇರುವಂತ 2 ಬಿ ಪ್ರವರ್ಗದಡಿ ಇದ್ದ 4% ರಷ್ಟು ಮೀಸಲಾತಿಯನ್ನು ರದ್ದುಗೊಳಿಸಲಾಗಿದೆ.
ಇದರ ಪರ್ಯಾಯವಾಗಿ ಮುಸ್ಲಿಂ ಸಮುದಾಯಕ್ಕೆ ಆರ್ಥಿಕವಾಗಿ ಹಿಂದುಳಿದಿರುವ ಈ EWS ಅಡಿಯಲ್ಲಿರುವ 10% ಮೀಸಲಾತಿಯಲ್ಲಿ ಈ ಸಮುದಾಯವನ್ನು ಸೇರಿಸಲಾಗಿದೆ .ದಲಿತ ಒಳ ಮೀಸಲಾತಿಯಲ್ಲಿ ಬಲಗೈ ಪಂಗಡ 5.5%
ಎಡಗೈ ಪಂಗಡ 6% ರಷ್ಟು ಪಾಲು ಪಡೆದರೆ ಲಂಬಾಣಿ, ಭುವಿ ,ಸಮುದಾಯಗಳಿಗ 4. 5% ಇತರೆ ಅಲುಮಾರಿ ಸಮುದಾಯ ಗಳಿಗೆ 1% ರಷ್ಟು ಒಳ ಮೀಸಲಾತಿಯನ್ನು ನಿಗದಿ ಮಾಡಲಾಗಿದೆ .
ಈ ಬದಲಾವಣೆಗಳಿಂದಾಗಿ ಸಮುದಾಯಗಳ ಲೆಕ್ಕಾಚಾರ ಏನೇ ಆಗಿದ್ದರು ಕೂಡ ಭಾರತೀಯ ಜನತಾ ಪಕ್ಷ ಚುನಾವಣೆಯ ಸಂದರ್ಭದಲ್ಲಿ ಇದು ಮಾಸ್ಟರ್ ಶಾರ್ಟ್ ಎಂದು ಹೇಳಲಾಗುತ್ತಿದೆ ಈ ಬದಲಾವಣೆಗಳಿಂದಾಗಿ ಸಮುದಾಯಗಳ ಪ್ರತಿಕ್ರಿಯೆ ಏನ್ ಅಗಲಿದೆ ಎನ್ನುವುದು ನೋಡುವಂತಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


