ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಹೋಬಾದಲ್ಲಿ ದುಷ್ಕರ್ಮಿಗಳು ಜ್ಯುವೆಲರಿ ಮಾಲೀಕನ ಮೇಲೆ ಗುಂಡು ಹಾರಿಸಿ, ಚಿನ್ನಾಭರಣ ದೋಚಿ ಹಣ ತುಂಬಿದ್ದ ಬ್ಯಾಗ್ ನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.
ರಕ್ತಸಿಕ್ತವಾಗಿದ್ದ ವ್ಯಾಪಾರಿಯನ್ನು ಕುಟುಂಬದವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ಆಗಮಿಸಿದ ಎಸ್ಪಿ ಅಪರ್ಣಾ ಗುಪ್ತ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ್ದಾರೆ.
ಅಪರಿಚಿತ ದುಷ್ಕರ್ಮಿಗಳು ಜ್ಯುವೆಲರಿ ಮಾಲೀಕನಿಗಾಗಿ ಹೊಂಚು ಹಾಕಿ ಕುಳಿತಿದ್ದರು. ಈ ಘಟನೆಯಲ್ಲಿ ಅಲಿಪುರ ನಿವಾಸಿ ದೂಳಿಚಂದ್ರ ಎಂಬುವವರ ಪುತ್ರ ಅಜಯ್ ಕಾಂತ್ ಗೆ ಗಂಭೀರ ಗಾಯಗಳಾಗಿವೆ.


