ಇಸ್ರೇಲ್: ಇರಾನ್ ನಿಂದ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದೆ. ಇದರಿಂದಾಗಿ ಇಸ್ರೇಲ್ ನಲ್ಲಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇರಾನ್ ನ ಕ್ಷಿಪಣಿ ದಾಳಿ ಹಿನ್ನೆಲೆ ಕೆಲವು ವಿಮಾನಗಳನ್ನು ತುರ್ತು ಲ್ಯಾಂಡ್ ಮಾಡಲಾಗಿದೆ. ಸ್ವಿಜರ್ ಲ್ಯಾಂಡ್ ನಿಂದ ದುಬೈ ಮಾರ್ಗವಾಗಿ ಭಾರತಕ್ಕೆ ಬರುತ್ತಿದ್ದ ಕನ್ನಡಿಗರು ಈಗ ತುರ್ತು ಲ್ಯಾಂಡಿಂಗ್ ನಿಂದಾಗಿ ಅತಂತ್ರರಾಗಿದ್ದಾರೆ. ಕನ್ನಡಿಗರು ಸೇರಿದಂತೆ ಭಾರತಕ್ಕೆ ಬರುತ್ತಿದ್ದ 300 ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಯುದ್ಧದ ವಾತಾವರಣದಿಂದಾಗಿ ಇರಾನ್, ಇರಾಕ್ ವಾಯುಸೀಮಾ ಪ್ರದೇಶ ಬಂದ್ ಮಾಡಲಾಗಿದೆ. ಹೀಗಾಗಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಭಾರತೀಯ ಪ್ರಯಾಣಿಕರು ವಿಮಾನದಲ್ಲೇ ಕಾಲ ಕಳೆಯುವಂತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296