ತುಮಕೂರು: ದೇಶದ ಬೆನ್ನೆಲುಬು ಪ್ರತಿಯೊಬ್ಬರಿಗೂ ಅನ್ನ ನೀಡುವ ಶ್ರಮಿಕ ವರ್ಗವೆಂದರೆ ಅದು ರೈತ ಕುಟುಂಬ. ದೇಶಕ್ಕೆ ಅನ್ನ ಹಾಕುವ ಅನ್ನದಾತನ ಬೆನ್ನುಮೂಳೆಯನ್ನು ದೇಶದಲ್ಲಿ ಇದುವರೆಗೂ ಅಧಿಕಾರ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಮುರಿದಿವೆ. ರೈತ ಮತ್ತು ರೈತರ ಸಂಘಟನೆಗಳನ್ನು ದುರುಪಯೋಗ ಪಡಿಸಿಕೊಂಡು ರಾಜ್ಯದಲ್ಲಿ ಆಡಳಿತ ನೀಡುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಹೆಚ್ ಎ ಜಯರಾಮಯ್ಯ ಅವರು ತಿಳಿಸಿದರು.
ತಮ್ಮ ಕಚೇರಿಯಲ್ಲಿ ವಿಶ್ವ ರೈತರ ದಿನಾಚರಣೆ ಪ್ರಯುಕ್ತ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಮಾತನಾಡಿದ ಅವರು ರೈತರ ಪರವಾಗಿ ಒಗ್ಗಟ್ಟಿನಿಂದ ರೈತರಿಗೆ ಸಾಮಾಜಿಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಈ ದಿನಾಚರಣೆಯನ್ನು ಸಮರ್ಪಣೆ ಮಾಡುತ್ತಿದ್ದೇವೆ. ಅನ್ನದಾತನಿಂದ ಮತ ಪಡೆದು ರೈತರ ಬೆನ್ನುಮೂಳೆಯನ್ನು ಮುರಿಯುತ್ತಲೇ ಬಂದಿರುವ ಸರ್ಕಾರದ ಒಬಂದಿ ನೀತಿಯನ್ನು ನಮ್ಮ ಪಕ್ಷ ಖಂಡಿಸುತ್ತದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ನಂತರದಲ್ಲೂ ರೈತರಿಗೆ ಸಂವಿಧಾನ ಬದ್ಧವಾಗಿ ಸಲ್ಲಬೇಕಾದ ಸವಲತ್ತುಗಳು ಇದುವರೆಗೂ ದೊರೆಯುತ್ತಿಲ್ಲ. ದೇಶಕ್ಕೆ ಅನ್ನ ನೀಡುವ ಪ್ರತಿ ರೈತ ಕುಟುಂಬಗಳು ನೆಮ್ಮದಿಯಿಂದ ಬದುಕುವಂತಹ ಯೋಜನೆಯ ವಾತಾವರಣವನ್ನು ಯಾವುದೇ ಸರ್ಕಾರ ನೀಡಲಿಲ್ಲ. ಗೊಬ್ಬರ, ಬೀಜ, ಬೆಂಬಲ ಬೆಲೆ ಸೇರಿದಂತೆ ಅನೇಕ ಕೃಷಿ ನೀತಿಗಳ ವಿರುದ್ಧ ಅನ್ನದಾತ ಇಂದು ಬೀದಿಗೆ ಇಳಿದು ಹೋರಾಟ ಮಾಡುತ್ತಲೇ ಇದ್ದಾನೆ. ಈಗಾಗಿ ಅಧಿಕಾರದಲ್ಲಿರುವ ಪಕ್ಷಗಳು ಕಿಮ್ಮತ್ತು ನೀಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದರು.
ರೈತರ ಪರವಾಗಿ ಮಾತನಾಡುತ್ತಾ ಕಾಲಹರಣ ಮಾಡುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ದೇಶದ ರೈತರು ತಿರಸ್ಕರಿಸಬೇಕು ಮುಂಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಗೆ ಬಹುಮತ ನೀಡಿದ್ದಲ್ಲಿ ಇಂತಹ ಭಾವನೆಗಳನ್ನು ನೀಗಿಸುವ ಸರ್ವ ಪ್ರಯತ್ನವನ್ನು ಮಾಡಲಾಗುವುದು ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


