ಹೆಚ್.ಡಿ.ಕೋಟೆ: ಮೃತಪಟ್ಟ 15 ದಿನಗಳ ಬಳಿಕ ಹೊರದೇಶದಿಂದ ಹಕ್ಕಿಪಿಕ್ಕಿ ಸಮುದಾಯದ ವ್ಯಕ್ತಿಯ ಮೃತದೇಹ ಸ್ವಗ್ರಾಮಕ್ಕೆ ತರಿಸಿ ಶಾಸಕ ಅನಿಲ್ ಚಿಕ್ಕಮಾದು ಮಾನವೀಯತೆ ಮೆರೆದಿದ್ದಾರೆ.
ಜೀವನೋಪಾಯಕ್ಕಾಗಿ ಮಸಾಜ್ ಕೆಲಸ ಬಯಸಿ ಆಫ್ರಿಕಾ ದೇಶಕ್ಕೆ ತೆರಳಿದ್ದ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ ಗ್ರಾಮದ ಇಫ್ರಾಹಿಂ (20) ಮೃತ ವ್ಯಕ್ತಿಯಾಗಿದ್ದಾರೆ.
ಮಸಾಜ್ ಕೆಲಸಕ್ಕಾಗಿ ಕಳೆದ ಒಂದು ವರ್ಷದ ಹಿಂದೆ ಆಫ್ರಿಕಾ ದೇಶಕ್ಕೆ ಹೋಗಿ ಅಲ್ಲೆ ನೆಲೆಸಿದ್ದ ಇಫ್ರಾಹಿಂಗೆ ಜು.2ರಂದು ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಆಫ್ರಿಕಾ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆವರು ಮೃತಪಟ್ಟಿದ್ದರು.
ಕುಟುಂಬದಲ್ಲಿ ಏಕೈಕ ಗಂಡು ಮಗನಾಗಿದ್ದ ಇಫ್ರಾಹಿಂ ಬಡತನದ ಬೇಗೆಯಲ್ಲೂ ಹತ್ತು ಮಂದಿ ಕುಟುಂಬಸ್ಥರ ಜೀವನದ ನಿರ್ವಹಣೆ ಹೊರೆ ಹೊತ್ತಿದ್ದ. ಇಫ್ರಾಹಿಂನನ್ನು ಕಳೆದುಕೊಂಡ ಕುಟುಂಬ ಮೃತ ದೇಹದ ಅಂತಿಮ ದರ್ಶನ ಪಡೆದು ಸ್ವಗ್ರಾಮದಲ್ಲೇ ಸಂಸ್ಕಾರ ಮಾಡುವ ಹಂಬಲ ಇತ್ತು. ಹೀಗಾಗಿ ಆತನ ಮೃತದೇಹವನ್ನು ಭಾರತಕ್ಕೆ ಕರೆತರಲು ಶಾಸಕ ಅನಿಲ್ ಚಿಕ್ಕಮಾದು ಅವರ ಮೂಲಕ ಸರ್ಕಾರದ ಮೊರೆ ಹೋಗಿದ್ದರು.
ಫೋಷಕರ ಮನವಿಗೆ ಸ್ಪಂದಿಸಿದ ಶಾಸಕ ಅನಿಲ್ ಚಿಕ್ಕಮಾದು ಸರ್ಕಾರದ ಸಂಬಂಧಪಟ್ಟ ಸಂಸದರು, ಸಚಿವರ ಮೂಲಕ ಕೊನೆಗೂ 15 ದಿನಗಳ ಬಳಿಕ ಮೃತದೇಹ ಭಾರತಕ್ಕೆ ಕರೆ ತರಲು ಕಾರಣವಾದರು. ಶನಿವಾರ ಸಂಜೆ ವಿಮಾನದಲ್ಲಿ ಮೃತದೇಹ ಭಾರತಕ್ಕೆ ತಲುಪಿತ್ತು.
ಶಾಸಕರ ಹಾಗೂ ಸರ್ಕಾರ, ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ತಾಲ್ಲೂಕು ಅಧಿಕಾರಿಗಳ ಸಹಕಾರಕ್ಕೆ ಟೈಗರ್ ಬ್ಲಾಕ್ ಗ್ರಾಮದ ಹಕ್ಕಿಪಿಕ್ಕಿ ಸಮುದಾಯ ಕೃತಜ್ಞತೆ ಸಲ್ಲಿಸಿದೆ.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


