ತುಮಕೂರು: ಹುಳಿಯಾರಿನ ವಿಜಯ ಕರ್ನಾಟಕ ವರದಿಗಾರ ಎಚ್.ಎ.ರಮೇಶ್ ಅವರ ಸಂಕಷ್ಟಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಅವರು ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಎಚ್.ಎ.ರಮೇಶ್ ಅವರಿಗೆ ಬ್ರೈನ್ ಟ್ಯೂಮರ್ ಆಗಿ ಎರಡು ಕಣ್ಣುಗಳು ಕಾಣದಾಗಿದ್ದವು. ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಸಹ ಕಣ್ಣುಗಳು ಮೊದಲಿನಂತಾಗಲಿಲ್ಲ. ವೈದ್ಯರು ಕೂಡ ದೇವರ ಮೇಲೆ ಭಾರ ಹಾಕಿ ಇನ್ನೆರಡು ತಿಂಗಳಲ್ಲಿ ಕಣ್ಣು ಬಂದರು ಬರಬಹುದು ಎಂದು ಹೇಳಿ ಕಳಿಸಿದ್ದಾರೆ.
ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸಾಕಿ ಸಲುಹಬೇಕಿದ್ದ ಕುಟುಂಬದ ಯಜಮಾನ ಎರಡು ಕಣ್ಣು ಕಾಣದೆ ಅಸಹಾಯಕ ಸ್ಥಿತಿಗೆ ಜಾರಿಕೊಂಡಿದ್ದ ಪರಿಣಾಮ ಮಕ್ಕಳ ವಿದ್ಯಾಭ್ಯಾಸ ಕುಟುಂಬದ ನಿರ್ವಹಣೆ ನೆನೆದು ಪತ್ನಿ ಚಿಂತಾಕ್ರಾಂತರಾಗಿದ್ದರು.
ವಿಷಯ ತಿಳಿದ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ಅವರು ಪತ್ರಕರ್ತನ ಮನೆಗೆ ಧಾವಿಸಿ ಬಂದು ವೈಯಕ್ತಿಕವಾಗಿ ಐವತ್ತು ಸಾವಿರ ಧನಸಹಾಯ ನೀಡಿದರು. ಅಲ್ಲದೆ ಪತ್ರಕರ್ತರ ಪತ್ನಿಗೆ ಉದ್ಯೋಗ ಕೊಡಿಸುವ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಭರವಸೆಯನ್ನ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿ ಬಂದಿದ್ದಾರೆ.
ಶಾಸಕ ಸಿ.ಬಿ.ಸುರೇಶ್ ಬಾಬು ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಸಕರ ಮಾನವೀಯ ಗುಣ ಎಲ್ಲ ರಾಜಕಾರಣಗಳಿಗೂ ಬರಲಿ ಎಂದು ಆಶಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW