nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೃತಕ ಬುದ್ಧಿಮತ್ತೆ ಬುದ್ಧಿವಂತಿಕೆಯಿಂದ ಬಳಸಬೇಕಿದೆ: ಕಂಪ್ಯೂಟರ್ ತಜ್ಞ ಪ್ರೊ.ಕೆ.ಪಿ.ರಾವ್ ಸಲಹೆ

    October 29, 2025

    ಕಾಡು ಪ್ರಾಣಿಗಳಿಂದ ಬೆಳೆ ಮತ್ತು ಪ್ರಾಣ ಹಾನಿ: ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

    October 29, 2025

    ಬೀದರ್ ಜಿಲ್ಲೆಯ ವಿವಿಧೆಡೆ ಸುರಿದ ಮಳೆ

    October 29, 2025
    Facebook Twitter Instagram
    ಟ್ರೆಂಡಿಂಗ್
    • ಕೃತಕ ಬುದ್ಧಿಮತ್ತೆ ಬುದ್ಧಿವಂತಿಕೆಯಿಂದ ಬಳಸಬೇಕಿದೆ: ಕಂಪ್ಯೂಟರ್ ತಜ್ಞ ಪ್ರೊ.ಕೆ.ಪಿ.ರಾವ್ ಸಲಹೆ
    • ಕಾಡು ಪ್ರಾಣಿಗಳಿಂದ ಬೆಳೆ ಮತ್ತು ಪ್ರಾಣ ಹಾನಿ: ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
    • ಬೀದರ್ ಜಿಲ್ಲೆಯ ವಿವಿಧೆಡೆ ಸುರಿದ ಮಳೆ
    • “ಅನಾಥ ಮಕ್ಕಳಿಗೆ ಪೋಷಕತ್ವ ಯೋಜನೆ ಲಾಭ ದೊರೆಯಬೇಕು”: ಪೋಷಕತ್ವ ಯೋಜನೆ ಮಾಹಿತಿ ಕಾರ್ಯಕ್ರಮ
    • ಅಚ್ಚರಿ ಎನ್ನುವಂತೆ ಮುಖ್ಯಮಂತ್ರಿ ಆಯ್ಕೆಯಾಗಬಹುದು: ಕೆ.ಎನ್.ರಾಜಣ್ಣ
    • ಹುಲಿ ಕಾರ್ಯಾಚರಣೆ: ಮುಳ್ಳೂರು ಸಮೀಪದ ಹೀರೇಗೌಡನಹುಂಡಿಯಲ್ಲಿ ಹುಲಿ ಸೆರೆ
    • ಸತತ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಸಾಧ್ಯ: ಡಾ.ಕೆ.ನಾಗಣ್ಣ
    • ಕನ್ನಡ ನಾಮಫಲಕ ಕಡ್ಡಾಯ: ಅಂಗಡಿ ಮಾಲಿಕರಿಗೆ ತಹಶೀಲ್ದಾರ್ ಸೂಚನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಾಸಕನ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ: ಜೆಡಿಎಸ್ ಮುಖಂಡನಿಂದ ವಾಗ್ದಾಳಿ
    ಗುಬ್ಬಿ July 18, 2022

    ಶಾಸಕನ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ: ಜೆಡಿಎಸ್ ಮುಖಂಡನಿಂದ ವಾಗ್ದಾಳಿ

    By adminJuly 18, 2022No Comments3 Mins Read
    gubbi

    ಗುಬ್ಬಿ:  ತಾಲ್ಲೂಕಿನಲ್ಲಿ ಶಾಸಕನ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜ್ ನೇರ ವಾಗ್ದಾಳಿ.

    ಗುಬ್ಬಿ ತಾಲ್ಲೂಕಿನಲ್ಲಿ 20ವರ್ಷಗಳಿಂದ ಶಾಸಕರಾಗಿರುವ ನೀನು ತಾಲ್ಲೂಕಿನ ಯಾವ ಅಭಿವೃದ್ಧಿ ಮಾಡಿದ್ದೀರಿ ಎಂಬುದನ್ನು ತೋರಿಸು ನೋಡೋಣ, ಕೇವಲ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು  ಅಧಿಕಾರಿಗಳನ್ನು ಬಳಸಿಕೊಂಡು ಭ್ರಷ್ಟಾಚಾರಕ್ಕೆ ನೇರ ಕಾರಣ ಶಾಸಕ ಎಸ್.ಆರ್.ಶ್ರೀನಿವಾಸ್ ಎಂದು ನೇರ ಆರೋಪ ಮಾಡಿದರು.


    Provided by
    Provided by
    Provided by

    ಗುಬ್ಬಿ ಪಟ್ಟಣದ ತಾಲೂಕು ಕಛೇರಿಯ ಮುಂಭಾಗದಲ್ಲಿ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಗುಬ್ಬಿ ತಾಲ್ಲೂಕಿನಲ್ಲಿ ನಡೆದಿರುವ ಭೂಹಗರಣವನ್ನು ಸಿಒಡಿ ತನಿಖೆಗೆ ವಹಿಸುವಂತೆ ಆಗ್ರಹಿಸಿ ಇಂದು ಆಯೋಜಸಿದ್ದ ಪ್ರತಿಭಟನೆಯಲ್ಲಿ  ಭಾಗವಹಿಸಿ ಮಾತನಾಡಿದ ಅವರು, ಶಾಸಕರೇ ನಾನಂತು ಬಗರುಕುಂ ಸಾಗುವಳಿ ಮತ್ತು 50.53 ಬಗ್ಗೆ ಪಿಹೆಚ್ ಡಿ ಪದವಿ ಮಾಡಿಲ್ಲ. ನೀವು ಬಗರುಕುಂ ಸಮಿತಿ ಅಧ್ಯಕ್ಷರಾಗಿರುವವರು. ಸಾಗುವಳಿ ವಿತರಣೆಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ರೈತರಿಗೆ ಅನ್ಯಾಯ ಮಾಡಲು ಮುಂದಾಗಬೇಡಿ.  ಇಂದು ರೈತರ ಜಮೀನು ಕಬಳಿಸಲು ಮುಂದಾಗಿರುವ ಭ್ರಷ್ಟ ಅಧಿಕಾರಿಗಳು ಮತ್ತು ತಮ್ಮ ಬೆಂಬಲಿಗರಿಗೆ ರೈತರಿಗೆ ಸಿಗಬೇಕಾದ ಜಮೀನಿನಲ್ಲಿ ಪ್ರಭಾವಿಗಳ ಹೆಸರಿಗೆ ಮಂಜೂರಾತಿ ಮಾಡುವ ಮೂಲಕ ಬಡವರ ಜಮೀನು ಕಬಳಿಸಲು ಮುಂದಾಗಿರುವುದು ಸರಿಯಲ್ಲ. ಇಂದು ಸುಮಾರು 450 ಎಕರೆ ಸರ್ಕಾರಿ ಜಮೀನು ಬ್ರಹಾಂಡ ಭ್ರಷ್ಟಾಚಾರ ದಲ್ಲಿ ತೋಡಗಿ ತಾಲೂಕು  ಕಛೇರಿಯ ಸಿಬ್ಬಂದಿ ಹಣ ಮಾಡುವ ಆಸೆಗೆ ಬಿದ್ದು ತಮ್ಮ ಜೇಬು ತುಂಬಿಸಲು ಹೋಗಿ ಇಂದು ಜೈಲು ಪಾಲಾಗಿದ್ದಾರೆ.

    ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಜನತೆಯ ಪರವಾಗಿ ನಿಲುವು ತೋರುವುದು ಬಿಟ್ಟರೆ ತಾಲ್ಲೂಕಿನ ಯಾವ ರೈತರಿಗೆ ನ್ಯಾಯ ದೊರಕಿಸುವಲ್ಲಿ  ನಿಮ್ಮ ನಿಲುವು ಇದೆ ಎಂಬುದು ತಾಲ್ಲೂಕಿನ ಜನತೆಗೆ ತಿಳಿದಿದೆ. ಈ ಬಾರಿ ಜನತೆ ನಿಮ್ಮ ದುರಾಡಳಿತ ದಿಂದ ಸಾಕಷ್ಟು ನೊಂದಿದ್ದು ಜನತೆ ಮತ್ತು ರೈತರ ಶಾಪ ನಿಮಗೆ ತಟ್ಟದೆ ಬಿಡುವುದಿಲ್ಲ ಇದಕ್ಕೆ ನೀವು ಪಶ್ಚಾತಾಪ ಪಡುವ ದಿನಗಳು ಸಮೀಪದಲ್ಲಿ ಬರಲಿದೆ ಎಂದು ಶಾಸಕ ಎಸ್. ಆರ್.ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ ಮಾಡಿದರು.

    ತಾವು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಸಮಯದಲ್ಲಿ ತಾಲ್ಲೂಕಿನ ರಾಜಕೀಯ ಮುಖಂಡರೊಬ್ಬರು ಭ್ರಷ್ಟಾಚಾರದ ಲ್ಲಿ ಸಿಲುಕಿದಾಗ ಗುಬ್ಬಿ ಪೊಲೀಸರು ಅವರನ್ನು ಚಡ್ಡಿ ಯಲ್ಲಿ ಠಾಣೆಯಲ್ಲಿ ಕುರಿಸಿದ ಸಮಯದಲ್ಲಿ ನಾನು ಆತನನ್ನು ಬಿಡಿಸಿದ್ದು ಎಂದು ಹೇಳುವ ನೀನು ಭ್ರಷ್ಟಾಚಾರದಲ್ಲಿ ತೊಡಗುವವರನ್ನು ಯಾಕೆ ಬಿಡಿಸಿಕೊಂಡು ಬಂದಿರಿ  ಎಂದು ಪ್ರಶ್ನಿಸಿದರು.

    ತಾಲೂಕಿನಲ್ಲಿ ಇಲ್ಲಿಯವರೆಗೂ ಯಾವುದೇ ಗುರುತರವಾದ ಉದ್ಯೋಗ ಸೃಷ್ಟಿಯನ್ನು ಮಾಡದೆ ಚುನಾವಣಾ ಸಮಯದಲ್ಲಿ ತಮ್ಮ ಹಿಂಬಾಲಕರ ದರ್ಪದಿಂದ ಚುನಾವಣೆ ಗೆಲ್ಲುವುದು ಮುಖ್ಯವಲ್ಲ ತಾಲೂಕಿನ ರೈತ  ಹಾಗೂ ಬಡ ಕುಟುಂಬಗಳ ಕಷ್ಟ ಸುಖಗಳಿಗಳಿಗೆ ಸ್ಪಂದಿಸುವಂತಹ ಜನಪ್ರತಿನಿಧಿಯಾಗಬೇಕು. ಕೇವಲ ತನ್ನ ಹಿಂಬಾಲಕರ ಅಭಿವೃದ್ಧಿಗೆ ಸರ್ಕಾರದಿಂದ ಬಂದಂತ ಕಾಮಗಾರಿ ಗುತ್ತಿಗೆಗಳನ್ನು ನೀಡಿ ಚುನಾವಣಾ ಸಮಯದಲ್ಲಿ  ಸಹಕಾರ ನೀಡಿದ ಋಣವನ್ನು ತೀರಿಸಲು ಈ ರೀತಿಯ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಿರುವುದು ಇವರ ಕಾರ್ಯವೈಕರಿಗೆ ಹಿಡಿದ ಕೈಗನ್ನಡಿ ಎಂದು ಆರೋಪಿಸಿದರು.

    ಈ ಭೂ ಮಾಫಿಯಾ ದಂಧೆಯ ಹಿಂದಿರುವ ಕಾಣದ ಕೈಗಳನ್ನು ಕಂಡುಹಿಡಿಯಲು ಸಿಓಡಿ ತನಿಖೆಗೆ ಒಪ್ಪಿಸಲು ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ರವರ ಮುಖಾಂತರ ತನಿಖೆಗೆ ಒಳಪಡಿಸಲು ಒಪ್ಪಿಸುತ್ತೇವೆ ಎಂದರು.

    ಜೆಡಿಎಸ್ ಮುಖಂಡ ಜೆ.ಡಿ.ಸುರೇಶ್ ಗೌಡ ಮಾತನಾಡಿ, ಭ್ರಷ್ಟಾಚಾರ ಈ ತಾಲೂಕಿನಲ್ಲಿ ತಾಂಡವ ಮಾಡುತ್ತಿದ್ದು, ಅಧಿಕಾರಿಗಳು ಶಾಸಕರ ಚೇಲಗಳಂತೆ ವರ್ತಿಸುತ್ತಿರುವುದು ಎಷ್ಟು ಸಮಂಜಸ ಎಂದ ಅವರು ತಮ್ಮ ಹಿಂಬಾಲಕರಿಗೆ ರೈತರು ಉಳುಮೆ ಮಾಡುತ್ತಿರುವ ಜಾಗವನ್ನು ನೀಡಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ ತಾಲೂಕಿನ ಹಳ್ಳಿಗಾಡಿನ ರಸ್ತೆಗಳು ಪಟ್ಟಣದ ರಸ್ತೆಗಳು ಇವುಗಳನ್ನು ನೋಡಿದರೆ ಅಭಿವೃದ್ಧಿ ಕಾರ್ಯದ ಕಾರ್ಯವೈಕರಿಯೇ ಜನತೆಗೆ ತಿಳಿಯುತ್ತದೆ.  ಶಾಸಕರ ಎಂಬಾಲಕರು ಎಷ್ಟು ಜನ ಜೈಲು ಸೇರಿದ್ದಾರೆ ಎಂದು ಪ್ರಶ್ನಿಸಿದವರು ಮುಂದಿನ ದಿನಗಳಲ್ಲಿ ಶಾಸಕರ ಆರ್ಭಟವು ನಡೆಯುವುದಿಲ್ಲ. ಮತದಾರ ಪ್ರಭು ವು ವೀಕ್ಷಿಸುತ್ತಿದ್ದಾನೆ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ  ತಹಸೀಲ್ದಾರ್ ರವರ ಮುಖಾಂತರ ಕಂದಾಯ ಸಚಿವರಿಗೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳಿಗೆ ಭೂ ಹಗರಣದ ಬಗ್ಗೆ ಸಿಓಡಿ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕೀರಪ್ಪ,   ಜೆಡಿಎಸ್ ಮುಖಂಡ ಶಿವಲಿಂಗಯ್ಯ,  ಎ. ಪಿ.ಎಂ.ಸಿ.ಯೋಗಾನಂದ, ಡಿ.ರಘು, ಫಿರ್ದೋಸ್ ಅಲಿ, ವಿಜಯ್ ಕುಮಾರ್, ಯಲ್ಲಾಪುರ ಗಂಗಣ್ಣ, ಕಡಬ ಗ್ರಾಮ ಪಂಚಾಯತಿ ಸದಸ್ಯರಾದ ಪುರುಷೋತ್ತಮ್, ಗೋಪಾಲ್ ಗೌಡ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಗುಬ್ಬಿ ತಾಲೂಕಿನ ಜಮೀನು ಕಳೆದುಕೊಂಡ ರೈತರು ಹಾಗೂ ಇನ್ನಿತರರು ಭಾಗವಹಿಸಿದ್ದರು.

     ವರದಿ:  ಮಂಜುನಾಥ್, ಗುಬ್ಬಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಅವೈಜ್ಞಾನಿಕ ಟೋಲ್ ಸಂಗ್ರಹ ತೆರವುಗೊಳಿಸಲು ಒತ್ತಾಯಿಸಿ ಪ್ರತಿಭಟನೆ

    October 28, 2025

    ಹೆದ್ದಾರಿ ನಡುವೆ ರಾಸುಗಳನ್ನು ಮೇಯಿಸುತ್ತಿರುವ ರೈತರು | ಹಲವೆಡೆ ಅಪಘಾತ!

    October 15, 2025

    ಗುಬ್ಬಿ | ಅಕ್ರಮ ಮಸೀದಿ ನಿರ್ಮಾಣ ಆರೋಪ: ಕ್ರಮಕ್ಕೆ ಹೈಕೋರ್ಟ್ ಆದೇಶ

    October 11, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಕೃತಕ ಬುದ್ಧಿಮತ್ತೆ ಬುದ್ಧಿವಂತಿಕೆಯಿಂದ ಬಳಸಬೇಕಿದೆ: ಕಂಪ್ಯೂಟರ್ ತಜ್ಞ ಪ್ರೊ.ಕೆ.ಪಿ.ರಾವ್ ಸಲಹೆ

    October 29, 2025

    ತುಮಕೂರು: ಕೃತಕ ಬುದ್ಧಿಮತ್ತೆಯನ್ನು (ಎ.ಐ.) ಸಾಕಷ್ಟು ಎಚ್ಚರಿಕೆ, ಬುದ್ಧಿವಂತಿಕೆಯಿಂದ ಬಳಸಬೇಕಿದೆ ಎಂದು ಕಂಪ್ಯೂಟರ್ ತಜ್ಞ ಪ್ರೊ.ಕೆ.ಪಿ.ರಾವ್ ಸಲಹೆ ಮಾಡಿದರು. ತುಮಕೂರು…

    ಕಾಡು ಪ್ರಾಣಿಗಳಿಂದ ಬೆಳೆ ಮತ್ತು ಪ್ರಾಣ ಹಾನಿ: ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

    October 29, 2025

    ಬೀದರ್ ಜಿಲ್ಲೆಯ ವಿವಿಧೆಡೆ ಸುರಿದ ಮಳೆ

    October 29, 2025

    “ಅನಾಥ ಮಕ್ಕಳಿಗೆ ಪೋಷಕತ್ವ ಯೋಜನೆ ಲಾಭ ದೊರೆಯಬೇಕು”: ಪೋಷಕತ್ವ ಯೋಜನೆ ಮಾಹಿತಿ ಕಾರ್ಯಕ್ರಮ

    October 29, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.