ಇಟಾವಾ(ಉತ್ತರ ಪ್ರದೇಶ: ಆಗ್ರಾ-ವಾರಣಾಸಿ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಹಸಿರುವ ಬಾವುಟ ಬೀಸುವ ವೇಳೆ ಶಾಸಕಿಯೊಬ್ಬರು ಆಯತಪ್ಪಿ ರೈಲ್ವೇ ಹಳಿಗಳ ಮೇಲೆ ಬಿದ್ದ ಘಟನೆ ನಡೆದಿದೆ.
ಬಿಜೆಪಿಯ ಇಟಾವಾ ಶಾಸಕಿ ಸರಿತಾ ಬದೌರಿಯಾ ಹಳಿಗಳ ಮೇಲೆ ಬಿದ್ದ ಶಾಸಕಿಯಾಗಿದ್ದಾರೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ರೈಲು ಆಗಮಿಸುತ್ತಿದ್ದಂತೆ ಕಿಕ್ಕಿರಿದ ಪ್ಲಾಟ್ ಫಾರ್ಮ್ ನಡುವೆ ಈ ಘಟನೆ ನಡೆದಿದೆ. 61 ವರ್ಷದ ಎರಡನೇ ಅವಧಿಯ ಬಿಜೆಪಿ ಶಾಸಕಿ ವೇದಿಕೆಯಲ್ಲಿ ನಿಂತಿದ್ದಾಗ ಹಸಿರು ಬಾವುಟವನ್ನು ಹಿಡಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ವಂದೇ ಭಾರತ್ ರೈಲಿನ ವರ್ಚುವಲ್ ಉದ್ಘಾಟನೆಯ ನಂತರ, 20175 ಸಂಖ್ಯೆಯ ರೈಲಿಗೆ ಆಗ್ರಾದಿಂದ ರೈಲು ಸಚಿವ ರವನೀತ್ ಸಿಂಗ್ ಬಿಟ್ಟು ಅವರು ಫ್ಲ್ಯಾಗ್ ಆಫ್ ಮಾಡಿದರು. ಈ ವೇಳೆ ಜಾರಿ ಹಳಿ ಮೇಲೆ ಬಿದ್ದಿದ್ದಾರೆ .
ರೈಲಿನ ಹಾರ್ನ್ ಹೊರಡುವ ಸೂಚನೆ ನೀಡುತ್ತಿದ್ದಂತೆಯೇ ಶಾಸಕಿ ರೈಲಿನ ಮುಂಭಾಗಕ್ಕೆ ಬಿದ್ದಿದ್ದಾರೆ. ನಂತರ ರೈಲನ್ನು ನಿಲ್ಲಿಸಿ ಬಿಜೆಪಿಯ ಇಟಾವಾ ಘಟಕದ ಖಜಾಂಚಿ ಸಂಜೀವ್ ಭದೌರಿಯಾ ಶಾಸಕಿಯನ್ನು ರಕ್ಷಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296