ಬೀದರ್: ಒಳ ಮೀಸಲಾತಿ ಜಾರಿಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಧ್ವನಿಯೆತ್ತಬೇಕು, ಅಲ್ಲದೇ ಹಕ್ಕೊತ್ತಾಯ ಸಮಾವೇಶದಲ್ಲಿ ಭಾಗಿಯಾಗಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದಿಂದ ಇಂದು ಔರಾದ ಶಾಸಕರಾದ ಪ್ರಭು ಚೌವ್ಹಾಣ್ ಅವರ ಕಚೇರಿ ಎದುರು ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸ್ವಾಮಿದ ಮೇಘ ಅವರ ನೇತೃತ್ವದಲ್ಲಿ ತಮಟೆ ಚಳುವಳಿ ಮಾಡಲಾಯಿತು.
ಈ ಪ್ರತಿಭಟನೆಯಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿ ತಾಲೂಕ ಅಧ್ಯಕ್ಷರುಗಳಾದ ರವಿ ಕಾರಂಜಿ, ವಿಜಯ ಕುಮಾರ, ಸಮಾಜದ ಯುವ ಘಟಕ ಅಧ್ಯಕ್ಷರಾದ ಮಾರುತಿ ಸೂರ್ಯವಂಶಿ, ಸಮಾಜದ ಮುಖಂಡರಾದ ಅನಿಲ ಕಾರಂಜಿ, ಗೋವಿಂದ ಬೋಸ್ಲೆ, ಶಾಮ ಹಲ್ಯಾಳ, ಸಂಜು ಕುಮಾರ ಹೋಳಕರ, ಜಾಂಬ ಯುವ ಸೇನೆ ತಾಲೂಕು ಉಪಾಧ್ಯಕ್ಷರು ಜೈವಂತ್ ಮೇತ್ರೆ ಚಿಂತಕಿ, ಶಿವರಾಜ ಬೆಲದ್ದಾಳ, ದಾವಿದ ಸಂತಪೂರ, ಸುಮಂತ ಉಜನಿ, ನಾಗೇಶ ಸಾಕ್ರೆ ಮುಂತಾದವರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx