ಬೆಂಗಳೂರಿನ ಸೂಲಿಕುಂಟೆ ಸ್ಲಂ ಬೋರ್ಡ್ ಮನೆಗಳ ಬಳಿ ಸ್ಥಳೀಯರೊಂದಿಗೆ ಕೂಡಿ ಪ್ರತಿಭಟನೆ ನಡೆಸಲಾಯಿತು. ಮಹದೇವಪುರ ವಿಧಾನಸಭಾ ಕ್ಷೇತ್ರದ ಕೊಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಲಿಕುಂಟೆ ಗ್ರಾಮದಲ್ಲಿ 50% ಮೀಸಲಾತಿ ಅಡಿ ಬರುವ ಸ್ಲಂ ಬೋರ್ಡ್ ಮನೆಗಳನ್ನು ಸ್ಥಳೀಯರಿಗೆ ನೀಡದಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ, ಸೂಲಿಕುಂಟೆ ಸ್ಲಂ ಬೋರ್ಡ್ ಮನೆಗಳ ಬಳಿ ಸ್ಥಳೀಯರೊಂದಿಗೆ ಕೂಡಿ ಶಾಸಕಿ ಮಂಜುಳಾ ಲಿಂಬಾವಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ನಗರ ಮಂಡಲ ಅಧ್ಯಕ್ಷರಾದ ಮನೋಹರ ರೆಡ್ಡಿ, ಮಹದೇವಪುರ ಟಾಸ್ಕ್ ಫೋರ್ಸ್‌ನ ಸಾಮಾಜಿಕ ಮತ್ತು ಸಬಲೀಕರಣ ಅಧ್ಯಕ್ಷರಾದ ವೆಂಕಟಸ್ವಾಮಿ ರೆಡ್ಡಿ ಸೇರಿದಂತೆ ಮುಖಂಡರು ಸ್ಥಳೀಯರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


