nammatumakuru

    Subscribe to Updates

    Get the latest creative news from FooBar about art, design and business.

    What's Hot

    ದೇವರು ಬಂದಂತೆ ನಾಟಕವಾಡಿ ದಲಿತ ನವದಂಪತಿಗೆ ಅವಮಾನ:  ಒಬ್ಬನ ಸೆರೆ, ಹಲವರ ವಿರುದ್ಧ ಪ್ರಕರಣ ದಾಖಲು

    February 22, 2026

    ಮಧುಗಿರಿ: ಬಸ್ ನಿಲ್ದಾಣಗಳಲ್ಲಿ ತಂಗುದಾಣಗಳ ಕೊರತೆ; ಪ್ರಯಾಣಿಕರ ಪರದಾಟ

    February 21, 2026

    ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

    February 21, 2026
    Facebook Twitter Instagram
    ಟ್ರೆಂಡಿಂಗ್
    • ದೇವರು ಬಂದಂತೆ ನಾಟಕವಾಡಿ ದಲಿತ ನವದಂಪತಿಗೆ ಅವಮಾನ:  ಒಬ್ಬನ ಸೆರೆ, ಹಲವರ ವಿರುದ್ಧ ಪ್ರಕರಣ ದಾಖಲು
    • ಮಧುಗಿರಿ: ಬಸ್ ನಿಲ್ದಾಣಗಳಲ್ಲಿ ತಂಗುದಾಣಗಳ ಕೊರತೆ; ಪ್ರಯಾಣಿಕರ ಪರದಾಟ
    • ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು
    • ಶೇ.99ರಷ್ಟು ಕಠಿಣ ಪರಿಶ್ರಮದಿಂದ ಸಾಧನೆ ಕಟ್ಟಿಟ್ಟ ಬುತ್ತಿ: ನ್ಯಾ.ರಾಜೇಶ್ ಎನ್.ಹೊಸಮನೆ ಅಭಿಮತ
    • ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ
    • ಪಂಚ ಗ್ಯಾರೆಂಟಿ, ‘ಲಂಚ ಗ್ಯಾರೆಂಟಿ’: ಸತೀಶ್ ಜಾರಕಿಹೊಳಿ ಹೇಳಿಕೆಯಲ್ಲೇ ಭ್ರಷ್ಟಾಚಾರಕ್ಕೆ ಸಾಕ್ಷಿ: ಬಿ.ವೈ.ವಿಜಯೇಂದ್ರ ವಾಗ್ದಾಳಿ
    • ವಿಕಲಚೇತನರಿಗೆ ರಾಜಕೀಯ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ: ಫೆ.22ರಂದು ತುಮಕೂರಿನಲ್ಲಿ ರ‍್ಯಾಲಿ
    • ಹತ್ತೇನಹಳ್ಳಿ ಮಾರಮ್ಮನಿಗೆ ಹೊಸ ತಾಳಿ ಸಮರ್ಪಣೆ: ಭಕ್ತರಿಗೆ ಸಂಭ್ರಮ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮತ ಎಣಿಕಾ ಕೇಂದ್ರಕ್ಕೆ ಮೊಬೈಲ್, ಎಲೆಕ್ಟ್ರಾನಿಕ್ಸ್ ಡಿವೈಸ್ ತರಲು ಅವಕಾಶವಿಲ್ಲ: ಚುನಾವಣಾಧಿಕಾರಿ ದಿವ್ಯ ಪ್ರಭು
    ಜಿಲ್ಲಾ ಸುದ್ದಿ June 2, 2024

    ಮತ ಎಣಿಕಾ ಕೇಂದ್ರಕ್ಕೆ ಮೊಬೈಲ್, ಎಲೆಕ್ಟ್ರಾನಿಕ್ಸ್ ಡಿವೈಸ್ ತರಲು ಅವಕಾಶವಿಲ್ಲ: ಚುನಾವಣಾಧಿಕಾರಿ ದಿವ್ಯ ಪ್ರಭು

    By adminJune 2, 2024No Comments4 Mins Read
    divya prabhu

    ಧಾರವಾಡ: ಮೇ 7 ರಂದು ಜರುಗಿದ ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣೆಯ ಮತ ಏಣಿಕಾ ಕಾರ್ಯಕ್ಕೆ ಧಾರವಾಡ ಜಿಲ್ಲಾಡಳಿತದಿಂದ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ 14 ಟೇಬಲ್ ಗಳಂತೆ ಒಟ್ಟು 112 ಟೇಬಲ್ ಗಳನ್ನು ಮತ ಏಣಿಕೆಗೆ ಸಿದ್ದಗೊಳಿಸಲಾಗಿದ್ದು, ಅಂದಾಜು 20 ಸುತ್ತುಗಳಲ್ಲಿ ಮತ ಏಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

    ಅವರು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಲೋಕಸಭಾ ಚುನಾವಣೆಯ ಮತ ಏಣಿಕೆ ಕಾರ್ಯದ ಸಿದ್ದತೆ ಮತ್ತು ಮತ ಏಣಿಕಾ ಕೇಂದ್ರದ ಕುರಿತು ಮಾಹಿತಿ ನೀಡಿ, ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.


    Provided by
    Provided by

    ಭಾರತ ಚುನಾವಣಾ ಆಯೋಗದ ಆದೇಶದಂತೆ ಮೊಬೈಲ್ ಹಾಗೂ ಸ್ಮಾರ್ಟ್ ವಾಚ್, ಎಲೆಕ್ಟ್ರಾನಿಕ್ ಡಿವೈಸಿಸ್ ಗಳನ್ನು ತರಲು ಅವಕಾಶವಿಲ್ಲ. ಮತ ಏಣಿಕಾ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು, ಮತ ಏಣಿಕಾ ಏಜಂಟರು, ಚುನಾವಣಾ ಏಜಂಟರು ಹಾಗೂ ಇತರರು ತಮ್ಮ ಮೊಬೈಲ್ ಗಳನ್ನು ಮತ ಏಣಿಕಾ ಕೇಂದ್ರದ ಹೊರಗೆ ಬಿಟ್ಟು ಬರಬೇಕು. ಒಂದು ವೇಳೆ ಮರೆತು ತಂದರೂ, ಅವರಿಗೆ ಪಸ್ಟ್ ಗೇಟ್ ದಲ್ಲಿ ಮೊಬೈಲ್ ಸಂಗ್ರಹ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಇಟ್ಟು ಚೀಟಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಮೊಬೈಲ್ ಹಾಗೂ ಇತರೆ ಡಿವೈಸ್ ಗಳನ್ನು ಮತ ಏಣಿಕಾ ಕೇಂದ್ರಕ್ಕೆ ತರಬಾರದೆಂದು ಅವರು ತಿಳಿಸಿದರು.

    ಮತ ಏಣಿಕಾ ಕೇಂದ್ರದ ಸುತ್ತೂಲು 200 ಮೀಟರ್ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆಯಿಂದ  ನಿಷೆಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಏಣಿಕೆ ಕೇಂದ್ರದಲ್ಲಿ ಮತ್ತು ಸೂತ್ತಲು ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    ಚುನಾವಣಾ ವೇಳಾಪಟ್ಟಿ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 12ರಂದು ಅಧಿಸೂಚನೆ ಪ್ರಕಟವಾಗಿದ್ದು, ಏಪ್ರಿಲ್ 19 ರಿಂದ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಏಪ್ರಿಲ್ 20 ರಂದು ನಾಮಪತ್ರ ಪರಿಶೀಲನೆ, ಏಪ್ರಿಲ್ 22 ರಂದು ನಾಮಪತ್ರ ಹಿಂಪಡೆಯಲು  ಕೊನೆಯ ದಿನವಾಗಿತ್ತು. ಮೇ 7 ರಂದು ಮತದಾನ ಜರಗಿದ್ದು, ಜೂನ್ 4 ರಂದು ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಜೂನ್ 6 ಕ್ಕೆ  ಪ್ರಸುತ್ತ ಲೋಕಸಭೆ ಚುನಾವಣೆಯ  ಮಾದರಿ ನೀತಿ ಸಂಹಿತೆ ಅವಧಿ ಮುಕ್ತಾಯ ಗೊಳ್ಳುವುದು ಎಂದು ಅವರು ತಿಳಿಸಿದರು.

    ಜಿಲ್ಲೆಯಲ್ಲಿ ನಿಷೇಧಾಜ್ಞೆ: ಜೂನ್ 4 ರಂದು ಮತ ಏಣಿಕೆ ಕಾರ್ಯ ನಡೆಯುವುದರಿಂದ ಜೂನ್  3, 2024 ರ ಸಂಜೆ 6 ಗಂಟೆಯಿಂದ ಜೂನ್ 5, 2024 ರ ರಾತ್ರಿ 10 ಗಂಟೆಯವರೆಗೆ ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಆರ್.ಪಿ.ಸಿ. 1973 ಕಲಂ 144 ರಡಿ ನಿಷೇದಾಜ್ಞೆ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

    ಮತ ಎಣಿಕೆ ಕೇಂದ್ರದಲ್ಲಿ  ಮಾಧ್ಯಮಗಳಿಗೆ ಪ್ರತ್ಯೇಕ ಕೇಂದ್ರ: ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ  ಮಾಧ್ಯಮಗಳಿಗೆ ವಿಶೇಷವಾಗಿ ಪ್ರತ್ಯೇಕ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದೆ.

    ಮತ ಎಣಿಕೆ ಕಾರ್ಯ ಮುಕ್ತಾಯಗೊಂಡ ನಂತರ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಇವಿಎಂ ಮತ್ತು ಮತ ಪತ್ರ (Election Papers) ಗಳನ್ನು ಮುದ್ರೆ (ಸೀಲ್) ಮಾಡುವ ಕಾರ್ಯ ಕೈಗೊಳ್ಳಲಾಗುವುದು.

    ಮುದ್ರೆ ಹಾಕಲಾದ   ಇವಿಎಂ ಗಳನ್ನು ಧಾರವಾಡದ ಮಿನಿ ವಿಧಾನಸೌಧದ ಆವರಣದಲ್ಲಿರುವ ಇ.ವಿ.ಎಂ. ವೇರ್‌ ಹೌಸ್ ಅನ್ನು ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ತೆರೆದು ವಿಧಾನಸಭಾ ಮತಕ್ಷೇತ್ರವಾರು ಭದ್ರಪಡಿಸಲಾಗುವುದು. ಮತ್ತು ಮುದ್ರೆ ಹಾಕಲಾದ ಮತ ಪತ್ರ (Election Papers )ಗಳನ್ನು ಧಾರವಾಡದ ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಲ್ಲಿ ಭದ್ರಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

    ಮೇ 30, 2024 ರಂದು ಎಲ್ಲ ಚುನಾವಣಾ ಅಭ್ಯರ್ಥಿಗಳ ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳ ಸಭೆ ಜರುಗಿಸಿ ಮತ ಎಣಿಕೆ ಕಾರ್ಯ ಹಾಗೂ ಮತ ಎಣಿಕೆ ದಿನದಂದು  ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಲಾಗಿದೆ ಎಂದು ಅವರು ತಿಳಿಸಿದರು.

    ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ: ಹುಬ್ಬಳ್ಳಿ, ಸವದತ್ತಿ, ನವಲಗುಂದ, ಕಲಘಟಗಿ, ಕಡೆಯಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಪೆಪ್ಪಿ ಕಂಪನಿಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಅರ್ಜಂಟ್‌ನಗರ, ಶಿರಡಿನಗರದ ಮಾರ್ಗವಾಗಿ ಬಸವನಗರ ಹತ್ತೀರ ಎಡಭಾಗದಲ್ಲಿ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು ಹಾಗೂ ಬೆಳಗಾವಿ ಕಡೆಯಿಂದ ಬರುವಂತ ವಾಹನಗಳು ಕೆಇಬಿ ಗ್ರೀಡ್ ಹತ್ತೀರ ಯು-ಟರ್ನ್ ಮಾಡಿಕೊಂಡು ಬಸವನಗರ ಹತ್ತೀರ ಎಡಭಾಗದಲ್ಲಿ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ತಿಳಿಸಲಾಗಿದೆ.

    ಚುನಾವಣಾ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ:

    ಪೆಪ್ಪಿ ಕಂಪನಿ ಕ್ರಾಸ್ ಮಾರ್ಗವಾಗಿ ಎತ್ತಿನಗುಡ್ಡ ಗ್ರಾಮದ ಕ್ರಾಸ್ ಮುಖಾಂತರ ಲೇಡಿಸ್ ಹಾಸ್ಟೆಲ್ ಕ್ರಾಸ್, ಮೆಣಸಿನಕಾಯಿ ಸರ್ಕಲ್ ಕಡೆಗೆ ಅಧಿಕಾರಿ ಮತ್ತು ಸಿಬ್ಬಂದಿ ಅವರನ್ನು ಇಳಿಸಿ ಪರತ್ ಅದೇ ಮಾರ್ಗವಾಗಿ ಹೊಸ ಆಡಳಿತ ಭವನದ ಹಿಂದುಗಡೆ ಖಾಲಿ ಜಾಗದಲ್ಲಿ ಮತ್ತು ಲೇಡಿಸ್ ಹಾಸ್ಟಲ್‌ದಿಂದ ಎಡಕ್ಕೆ ತಿರುಗಿ ಎತ್ತಿನಗುಡ್ಡ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ತಿಳಿಸಲಾಗಿದೆ.

    ಉಪನಗರ ಪೊಲೀಸ್ ಠಾಣೆ ಎದುರಿಗೆ (ಭಾರಿ ವಾಹನಗಳ ಡೈವರ್ಷನ್):

    ಹುಬ್ಬಳ್ಳಿ ಮತ್ತು ಸವದತ್ತಿ ಕಡೆಯಿಂದ ಬೆಳಗಾವಿ ಕಡೆಗೆ ಹೋಗುವಂತ ವಾಹನಗಳು ಉಪನಗರ ಪೊಲೀಸ್ ಠಾಣೆಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಜರ್ಮನ್ ಸರ್ಕಲ್ ಮಾರ್ಗವಾಗಿ ಕೆಲಗೇರಿ ಬೈಪಾಸ್ ಮುಖಾಂತರ ಬೆಳಗಾವಿ ಕಡೆಗೆ ಹೋಗಲು ಸೂಚಿಸಲಾಗಿದೆ.

    ನರೇಂದ್ರ ಬೈಪಾಸ್ ಏರಟೆಕ್ ಕ್ರಾಸ್ (ಭಾರಿ ವಾಹನಗಳ ಡೈವರ್ಷನ್):

    ಪೆಪ್ಪಿ ಕಂಪನಿ ಕ್ರಾಸ್ (ಲಘು ವಾಹನಗಳ ಡೈವರ್ಷನ್) ಬೆಳಗಾವಿ ಕಡೆಯಿಂದ ಧಾರವಾಡ ನಗರಕ್ಕೆ ಆಗಮಿಸುವ ಭಾರಿ ವಾಹನಗಳು ನರೇಂದ್ರ ಟೋಲ್‌ ಪ್ಲಾಜಾ ಮುಖಾಂತರ ಕೆಲಗೇರಿ ಬ್ರಿಡ್ಜ್‌ನಿಂದ ಕೆಳಗೆ ಇಳಿದು ಜರ್ಮನ್ ಸರ್ಕಲ್, ಉಪನಗರ ಪೊಲೀಸ್ ಠಾಣೆ ಮಾರ್ಗವಾಗಿ ಹುಬ್ಬಳ್ಳಿ ಹಾಗೂ ಸವದತ್ತಿ, ನವಲಗುಂದ ಕಡೆಗೆ ಹೋಗಲು ಸೂಚಿಸಲಾಗಿದೆ

    ಹುಬ್ಬಳ್ಳಿ ಮತ್ತು ಸವದತ್ತಿ ಕಡೆಯಿಂದ ಬೆಳಗಾವಿ ಕಡೆಗೆ ಹೋಗುವಂತ ಲಘು ವಾಹನಗಳು ಪೆಪ್ಪಿ ಕಂಪನಿಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಅರ್ಜಂಟ್‌ನಗರ ಶಿರಡಿನಗರ, ಬಸವನಗರ ಮಾರ್ಗವಾಗಿ ನರೇಂದ್ರ ಬೈಪಾಸ್ ಮುಖಾಂತರ ಬೆಳಗಾವಿ ಕಡೆಗೆ ಸಂಚರಿಸಬೇಕು.

    ಬಸವನಗರ ಕ್ರಾಸ್ (ಲಘು ವಾಹನಗಳ ಡೈವರ್ಷನ್) ಬೆಳಗಾವಿ ಕಡೆಯಿಂದ ಧಾರವಾಡ ನಗರಕ್ಕೆ ಆಗಮಿಸುವ ಲಘು ವಾಹನಗಳು ಕೆಇಬಿ ಗ್ರಿಡ್ ಹತ್ತಿರ ಯು-ಟರ್ನ್ ಮಾಡಿಕೊಂಡು ಬಸವನಗರ ಶಿರಡಿನಗರ, ಅರ್ಜಂಟ್‌ನಗರ ಪೆಪ್ಪಿ ಕಂಪನಿ ಮಾರ್ಗವಾಗಿ ಹಳೇ ಪಿಬಿ ರಸ್ತೆ ಮುಖಾಂತರ ಧಾರವಾಡ ನಗರದ ಕಡೆಗೆ ಹೋಗಲು ಸೂಚಿಸಲಾಗಿದೆ ಎಂದು ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ತಿಳಿಸಿದರು.

    ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ಶಾಂತಿ , ಸುವ್ಯವಸ್ಥೆ ಕಾಪಾಡಲು ಸುಮಾರು 2500 ಪೊಲೀಸ್ ಅಧಿಕಾರಿ,ಸಿಬ್ಬಂದಿಗಳನ್ನು ಮತ್ತು 6 ಕೆಎಸ್.ಆರ್.ಪಿ ತುಕುಡಿಗಳನ್ನು ಹಾಗೂ 500 ಹೋಮ್ ಗಾರ್ಡ್ ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

    ಪತ್ರಿಕಾಗೋಷ್ಟಿಯಲ್ಲಿ ಉಪ ಪೊಲೀಸ್ ಆ‌ಯುಕ್ತ ಕುಶಲ್ ಚೌಕ್ಸೆ , ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಇದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಶೇ.99ರಷ್ಟು ಕಠಿಣ ಪರಿಶ್ರಮದಿಂದ ಸಾಧನೆ ಕಟ್ಟಿಟ್ಟ ಬುತ್ತಿ: ನ್ಯಾ.ರಾಜೇಶ್ ಎನ್.ಹೊಸಮನೆ ಅಭಿಮತ

    February 21, 2026

    ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ

    February 21, 2026

    ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ

    February 20, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ದೇವರು ಬಂದಂತೆ ನಾಟಕವಾಡಿ ದಲಿತ ನವದಂಪತಿಗೆ ಅವಮಾನ:  ಒಬ್ಬನ ಸೆರೆ, ಹಲವರ ವಿರುದ್ಧ ಪ್ರಕರಣ ದಾಖಲು

    February 22, 2026

    ತುರುವೇಕೆರೆ: ದೇವರು ಬಂದಂತೆ ನಾಟಕವಾಡಿ ನೂತನ ದಲಿತ ದಂಪತಿಯನ್ನು ಅವಮಾನಿಸಿ ದೇವಾಲಯದಿಂದ ಹೊರಕಳಿಸಿದ ಘಟನೆಗೆ ಸಂಬಂಧಿಸಿದಂತೆ  ಕೃತ್ಯ ನಡೆಸಿದ ವ್ಯಕ್ತಿ…

    ಮಧುಗಿರಿ: ಬಸ್ ನಿಲ್ದಾಣಗಳಲ್ಲಿ ತಂಗುದಾಣಗಳ ಕೊರತೆ; ಪ್ರಯಾಣಿಕರ ಪರದಾಟ

    February 21, 2026

    ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

    February 21, 2026

    ಶೇ.99ರಷ್ಟು ಕಠಿಣ ಪರಿಶ್ರಮದಿಂದ ಸಾಧನೆ ಕಟ್ಟಿಟ್ಟ ಬುತ್ತಿ: ನ್ಯಾ.ರಾಜೇಶ್ ಎನ್.ಹೊಸಮನೆ ಅಭಿಮತ

    February 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.