ಬೆಂಗಳೂರಿನಲ್ಲಿ ಸುಮಾರು 2 ಸಾವಿರ ಮೆಟ್ರೊ ಪ್ರಯಾಣಿಕರು ನವೆಂಬರ್ 1 ರಂದು ನಮ್ಮ ಮೆಟ್ರೊ ಪರಿಚಯಿಸಿರುವ ನಮ್ಮ ಮೆಟ್ರೊ ಆ್ಯಪ್ ಹಾಗೂ ವಾಟ್ಸ್ ಆ್ಯಪ್ ಆ್ಯಪ್ ಆಧಾರಿತ ಟಿಕೆಟ್ ವ್ಯವಸ್ಥೆ ಮೂಲಕ ಕ್ಯೂಆರ್ ಟಿಕೆಟ್ ಗಳನ್ನು ಖರೀದಿಸಿದ್ದಾರೆ.
ಈಗ ನಮ್ಮ ಮೆಟ್ರೊ ಪ್ರಯಾಣಿಕರು ನಮ್ಮ ಮೆಟ್ರೊ ಆ್ಯಪ್‌ಗೆ ಲಾಗ್ ಆನ್ ಆಗಿ, ಅಥವಾ ವಾಟ್ಸಪ್ ನ ಚಾಟ್‌ಬಾಟ್ ಸಂಖ್ಯೆ (೮೧೦ ೫೫೫ ೬೬ ೭೭) ಮೂಲಕ ಟಿಕೆಟ್ ಗಳನ್ನು ಖರೀದಿಸಬಹುದು. ಈ ಆ್ಯಪ್ ಗಳ ಮೂಲಕವೇ ಹಣ ಪಾವತಿಸಿ, ಜೊತೆಗೆ ಟಿಕೆಟ್ ದರದ ಮೇಲೆ ಶೇ.5ರಷ್ಟು ರಿಯಾಯಿತಿಯನ್ನೂ ಪಡೆದುಕೊಳ್ಳಬಹುದಾಗಿದೆ.
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ನ ಪ್ರಕಾರ, ಮಂಗಳವಾರದಂದು ರಾತ್ರಿ ೮.೪೫ರವರೆಗೆ ನಮ್ಮ ಮೆಟ್ರೊ ಆ್ಯಪ್ ಹಾಗೂ ವಾಟ್ಸ್ ಆ್ಯಪ್ ಮೂಲಕ ಸುಮಾರು ೧,೬೬೯ ಪ್ರಯಾಣಿಕರು ಕ್ಯೂಆರ್ ಟಿಕೆಟ್ ಗಳನ್ನು ಖರೀದಿಸಿದ್ದರು ಎಂದು ಮಾಹಿತಿ ನೀಡಿದೆ.
ಬೆಳಗಿನ ಸಮಯದಲ್ಲಿ ಸುಮಾರು ೧೪,೪೦೦ ಜನರು ವಾಟ್ಸ್ ಆ್ಯಪ್ ಚಾಟ್ ಬಾಟ್ ಅನ್ನು ಬಳಸಿರುವುದಾಗಿ ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


