ಪ್ರಮೋದ್ ಮುತಾಲಿಕ್ ರಂಥವರನ್ನ ಮೊದಲು ಒದ್ದು ಒಳಗೆ ಹಾಕಬೇಕು, ಇಂಥವರನ್ನ ಒದ್ದು ಒಳಗೆ ಹಾಕದೇ ಇದ್ದಲ್ಲಿ, ಸಮಾಜದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಉಳಿಸಲಿಕ್ಕೆ ಕಷ್ಟ ಆಗುತ್ತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಆಜಾನ್ ವಿರುದ್ಧ ಸುಪ್ರಭಾತ ವಿಚಾರವಾಗಿ ಬಾದಾಮಿಯ ಚಿಕ್ಕಮುಚ್ಚಳಗುಡ್ಡ ಹೆಲಿಪ್ಯಾಡ್‌ನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ಇಂತಹ ವಿಷಯಗಳನ್ನ ಬೆಳೆಯೋದಕ್ಕೆ ಬಿಡಬಾರದು. ಮೌನವಾಗಿ ಒಪ್ಪಿಗೆ ಸೂಚಿಸುವುದನ್ನ ಬಿಡಬೇಕು ಎಂದರು.
ಸಮಾಜದಲ್ಲಿ ಸಾಮರಸ್ಯ ಹಾಳು ಮಾಡಿದ್ರೆ ಆಮೇಲೆ ರಿಪೇರಿ ಮಾಡೋಕಾಗುತ್ತಾ? ಇದು ರಾಮಸೇನೆಯೋ ? ರಾವಣ ಸೇನೆಯೋ? ಇವೆಲ್ಲಾ ಒಂದು ಕಡೆ ಇರಲಿ. ಸುಪ್ರೀಂ ಆದೇಶದಂತೆ ಸರ್ಕಾರ ಒಪ್ಪಿಗೆ ಕೊಡಲಿ. ಆ ಪ್ರಕಾರ ಹನುಮಾನ ಚಾಲೀಸಾ ಇವ್ರು ಓದಲಿ. ಅದಕ್ಕೆ ದೊಡ್ಡ ಪ್ರಚಾರ ಬೇಕಿಲ್ಲ. ನಮಗೆ ಸಂಕಷ್ಟ ಅಂದ್ರೆ ದಿನಾ ನಾವೆಲ್ಲ ಮನೆಯಲ್ಲೆ ಹನುಮಾನ ಚಾಲೀಸಾ ಹೇಳಿಕೊಳ್ಳಲ್ವಾ? ಆರೋಗ್ಯ ಸಮಸ್ಯೆ ಆದ್ರೆ, ಸಮಸ್ಯೆ ಉದ್ಭವ ಆದಾಗ ಮನೆಯಲ್ಲಿ ಹೇಳಿಕೊಳ್ಳುತ್ತೇವೆ. ಅದೇನು ದೊಡ್ಡ ಸಾಧನೆ ಅಲ್ಲ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


