ಸರಗೂರು : ಪಟ್ಟಣ ಪಂಚಾಯಿತಿಗೆ ಬರಬೇಕಾದ ಕಂದಾಯಗಳನ್ನು ನಿಗತ ಸಮಯಕ್ಕೆ ಸರಿಯಾಗಿ ವಸೂಲಿ ಮಾಡಿ ಇದರಿಂದ ಬಂದ ಹಣದಿಂದ ಪಟ್ಟಣದ ಅಭಿವೃದ್ಧಿಗಳಿಗೆ ಬಳಸಿಕೊಳ್ಳಬಹುದು ಎಂದು ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯ ವ್ಯಕ್ತಪಡಿಸಿದರು.
ಸರಗೂರು ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಸರಗೂರು ಪಟ್ಟಣದ ಅಭಿವೃದ್ಧಿ ಸಂಬಂಧ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣ ವ್ಯಾಪ್ತಿಯಲ್ಲಿ ಈ ಬಾರಿ ಸಂಗ್ರಹವಾದ ಕಂದಾಯ, ಏನೆಲ್ಲಾ ಖರ್ಚು ವೆಚ್ಚಗಳಾಗಿವೆ. ತಿಂಗಳಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಖರ್ಚಾಗುವ ಹಣಕ್ಕೆ ಸಂಬಂಧಿಸಿದಂತೆ ದಾಖಲೆಗಳು ಸೇರಿದಂತೆ ಸಭೆಯ ಅಂಜೆಡಾಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡುವಂತೆ ಮುಖ್ಯಾಧಿಕಾರಿ ಬಿ.ಜಿ.ಸತೀಶ್ ರವರನ್ನು ತರಾಟೆಗೆ ತೆಗೆದುಕೊಂಡರು.
ಮೊದಲು ಕಂದಾಯ ವಸೂಲಿಯನ್ನು ಮಾಡಬೇಕು ಇದಕ್ಕಾಗಿ ಒಂದು ಕಂದಾಯ ಅದಾಲತ್ ಕಾರ್ಯಕ್ರಮ ಮಾಡಿ ಇದರಿಂದ ಪಂಚಾಯಿತಿಗೂ ಹೆಚ್ಚಿನ ಆದಾಯ ಬಂದು ಪಟ್ಟಣದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬಹುದು ಎಂದರು.
ಸರ್ಕಾರದಿಂದ ಈಗಾಗಲೇ ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡುತ್ತಿದ್ದಾರೆರೆ. ಆದ್ದರಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಎಷ್ಟು ಸಾವುಗಳು ಸಂಭವಿಸಿವೆ ಎಂಬುದರ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿಕೊಳ್ಳಬೇಕು. ಅಲ್ಲದೇ ನಿವೇಶನ ಮತ್ತು ವಸತಿಗಳಿಗೆ ಸಂಬಂಧಿಸಿದ ದಾಖಲೆಗಳ ಸಮಸ್ಯೆ ಇದೆ ಎಂದು ಸದಸ್ಯರುಗಳು ತಿಳಿಸಿದ್ದಾರೆ ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಕೂಡಲೆ ಸರ್ವೆ ಮಾಡಿಸಿ ದಾಖಲೆಗಳನ್ನು ವಾರಸುದಾರರಿಗೆ ವದಗಿಸುವ ಪ್ರಯತ್ನ ಮಾಡಿ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ನೂತನ 100 ಬೆಡ್ ಗಳ ಸಾರ್ವಜನಿಕ ಆಸ್ಪತ್ರೆಯ ನಿರ್ಮಾಣ ಮಾಡಲು ಕ್ರಿಯಾಯೋಜನೆ ಸಿದ್ಧವಾಗುತಿದೆ ಜಾಗದ ಅವಶ್ಯಕತೆ ಇರುವುದರಿಂದ ಪಟ್ಟಣ ಪಂಚಾಯಿತಿ ಸದಸ್ಯರು ಉತ್ತಮ ಜಾಗವನ್ನು ಆಯ್ಕೆ ಮಾಡಿ. ಹಾಗೂ 1ನೇ ಮುಖ್ಯ ರಸ್ತೆಯ ನೂತನ ರಸ್ತೆ ನಿರ್ಮಾಣ ಮಾಡಲು ಅನುಧಾನ ಬಿಡುಗಡೆಯಾಗಿದ್ದು, ಕೂಡಲೇ ಅದರ ಕಾಮಗಾರಿಯನ್ನು ಆರಂಭಿಸಲಾಗುವುದು ಎಂಬ ಭರವಸೆ ನೀಡಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಎಸ್.ರಾಧಿಕಾಶ್ರೀನಾಥ್, ಉಪಾಧ್ಯಕ್ಷ ವಿನಯ್ ಪ್ರಸಾದ್, ಮುಖ್ಯಾಧಿಕಾರಿ ಬಿ.ಜಿ.ಸತೀಶ್, ಸದಸ್ಯರಾದ ಚೈತ್ರ ಸ್ವಾಮಿ, ಸಣ್ಣತಾಯಮ್ಮ, ಎಸ್.ಎಲ್.ರಾಜಣ್ಣ, ನೂರಳಸ್ವಾಮಿ, ಶಿವಕುಮಾರ್, ಸುಮಾರಾಮು, ಶ್ರೀನಿವಾಸ್, ದಿವ್ಯನವೀನಕುಮಾರ್, ಚಲುವಕೃಷ್ಣ ಮುಂತಾದವರು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy