ಸೀಮಿತ ಅವಧಿಯ ಉದ್ಯೋಗಗಳ ಹೆಸರಿನಲ್ಲಿ ನಿರುದ್ಯೋಗಿಗಳನ್ನು ವಂಚಿಸುತ್ತಿರುವ 100ಕ್ಕೂ ಹೆಚ್ಚು ವೆಬ್ ಸೈಟ್ ಗಳನ್ನು ಮುಚ್ಚಿರುವುದಾಗಿ ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.
ಈ ವೆಬ್ ಸೈಟ್ ಗಳು ಹಣಕಾಸು ಅಕ್ರಮಗಳಿಗೆ ದಾರಿ ಮಾಡಿಕೊಡುತ್ತಿದೆ. ಈ ವೆಬ್ ಸೈಟ್ ಗಳನ್ನು ವಿದೇಶದಿಂದ ನಡೆಸಲಾಗುತ್ತಿದೆ.
ಈ ವೆಬ್ ಸೈಟ್ ಗಳನ್ನು ಗುರುತಿಸಲು ಮತ್ತು ತಕ್ಷಣವೇ ಅವುಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಗೃಹ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ವಂಚನೆಯ ವೆಬ್ ಸೈಟ್ ಗಳನ್ನು ಗುರುತಿಸಿ ಮುಚ್ಚಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


