ಹಾಸನ: ದಸರಾ ಉದ್ಘಾಟನೆಗೆ ಚಾಮುಂಡೇಶ್ವರಿ ತಾಯಿ ನನ್ನನ್ನು ಕರೆಸಿಕೊಳ್ಳುತ್ತಿದ್ದಾರೆ ಎಂದು ಸಾಹಿತಿ ಬಾನು ಮುಷ್ತಾಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ತಾಯಿ ನನ್ನನ್ನು ಕರೆಸಿಕೊಳ್ಳುತ್ತಿದ್ದಾರೆ. ನಾನು ರಾಜ್ಯದ ಜನತೆ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಸಂಸದ ಯದುವೀರ ಅವರು ಸ್ವಾಗತ ಮಾಡಿದ್ದಾರೆ. ಅವರಂತಹ ಸಂಸದರು ಹೆಚ್ಚಾಗಲಿಯೆಂದು ಆಶಿಸುತ್ತೇನೆ. ಬಿಜೆಪಿಯವರು ಮಾಡುವ ಟೀಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರ ಟೀಕೆಗಳ ಬಗ್ಗೆ ನಾನು ಬೇಜಾರು ಮಾಡಿಕೊಳ್ಳುವುದಿಲ್ಲ. ಯಾವುದಕ್ಕೆ ಟೀಕೆ ಮಾಡಬೇಕು, ಮಾಡಬಾರದೆಂಬ ತಿಳುವಳಿಕೆ ಕಾಂಗ್ರೆಸ್–ಬಿಜೆಪಿ ಪಕ್ಷದವರಿಗೆ ಇರಬೇಕು ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC