ತಿಪಟೂರು: ತಾಲೂಕಿನ ಹೆಡಗರಹಳ್ಳಿ ಗ್ರಾಮದ ಮಹಾನವಮಿ ಮಂಟಪದಲ್ಲಿ ನವಜಾತ ಶಿಶು ಪತ್ತೆಯಾದ ಘಟನೆ ನಡೆದಿದೆ.
ಗ್ರಾಮದ ನಿವಾಸಿ ಆಶಾ ಕಾರ್ಯಕರ್ತೆ ಕಲಾವತಿ ವಾಕಿಂಗ್ ಮಾಡುವ ಸಂದರ್ಭದಲ್ಲಿ ಅಳುವಿನ ಶಬ್ದ ಕೇಳಿದ್ದು, ಸಮೀಪ ಹೋಗಿ ನೋಡಿದ ವೇಳೆ ಮಂಟಪದ ಬಳಿ ಸುಮಾರು ಎರಡರಿಂದ ಮೂರು ತಿಂಗಳ ನವಜಾತ ಶಿಶು ಕಂಡು ಬಂದಿದೆ.
ಕಲಾವತಿ ಅವರು ತಕ್ಷಣವೇ ನೊಣವಿನಕೆರೆ ಪೊಲೀಸ್ ಠಾಣೆಗೆ ಕರೆ ಮಾಡಿ 108 ಆಂಬುಲೆನ್ಸ್ ಕರೆ ಮಾಡಿ ನಂತರ ಸಿಬ್ಬಂದಿಗೆ ತಿಳಿಸಿದ್ದಾರೆ.
ಬಳಿಕ ನೊಣವಿನಕೆರೆ ಪಿಎಸ್ ಐ ಅಭಿಷೇಕ್ ಅವರ ಸಹಕಾರದೊಂದಿಗೆ 108 ಆಂಬುಲೆನ್ಸ್ ಸಿಬ್ಬಂದಿಗಳಾದ ಚಾಲಕ ಚಿದಾನಂದ ಹಾಗೂ ಸಹಾಯಕಿ ಧನಲಕ್ಷ್ಮಿ ಸ್ಥಳಕ್ಕೆ ಆಗಮಿಸಿ ನವಜಾತ ಶಿಶುವನ್ನು ಆಂಬುಲೆನ್ಸ್ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ತಿಪಟೂರುಗೆ ದಾಖಲು ಮಾಡಿದ್ದಾರೆ.
ಮಗು ಆರೋಗ್ಯವಾಗಿದ್ದು ಸುಮಾರು 4.5 ಕೆ.ಜಿ. ತೂಕವಿದೆ ಸಾರ್ವಜನಿಕ ಆಸ್ಪತ್ರೆ ಮಕ್ಕಳ ತಜ್ಞೆ ಶೀರಿಷ ಮಗುವಿನ ಆರೋಗ್ಯ ತಪಾಸಣೆಯನ್ನು ಮಾದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA