ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ತಾಯಿ- ಮಗನ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಆರೋಪಿ ಶೇಖಪ್ಪ ಅಲಿಯಾಸ್ ಶೇಖರಪ್ಪನನ್ನು (29) ಬಂಧಿಸಿದ್ದಾರೆ.
ರವೀಂದ್ರನಗರದಲ್ಲಿ ವಾಸವಿದ್ದ ನವನೀತಾ (33) ಹಾಗೂ ಮಗ ಸೃಜನ್ನನ್ನು (11) ಮಂಗಳವಾರ ರಾತ್ರಿ ಕೊಲೆ ಮಾಡಲಾಗಿತ್ತು. ನವನೀತಾ ಅವರ ಪತಿಯೇ ಕೃತ್ಯ ಎಸಗಿರುವ ಶಂಕೆ ಇತ್ತು. ಆದರೆ, ತನಿಖೆ ಕೈಗೊಂಡಾಗ ನವನೀತಾ ಪ್ರಿಯಕರ ಶೇಖಪ್ಪನೇ ಆರೋಪಿ ಎಂಬುದು ತಿಳಿಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.


