ಶಿರಾ: ನಗರದ ಪ್ರವಾಸಿ ಮಂದಿರ ವೃತ್ತದಲ್ಲಿ ಗುರುವಾರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನ ಹಾಗೂ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ನಡೆದ ಏಕತಾ ನಡಿಗೆಗೆ ಸಂಸದ ಗೋವಿಂದ ಕಾರಜೋಳ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ದೇಶದ ಏಕತೆಗಾಗಿ ಪಟೇಲ್ ಅವರು ತೆಗೆದುಕೊಂಡ ದೃಢನಿರ್ಧಾರಗಳಿಂದ ದೇಶ ಇಂದು ಸದೃಢವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಹಾಗೂ ಮಧುಗಿರಿ ಸಂಘಟನಾತ್ಮಕ ಬಿಜೆಪಿ ಘಟಕದ ಅಧ್ಯಕ್ಷ ಚಿದಾನಂದ್ ಎಂ.ಗೌಡ ಮಾತನಾಡಿ, ಒಂದೇ ಭಾರತ– ಆತ್ಮನಿರ್ಭರ ಭಾರತ ಘೋಷವಾಕ್ಯದಡಿಯಲ್ಲಿ ನಗರದಲ್ಲಿ ಏಕತಾ ನಡಿಗೆ ನಡೆಸಲಾಗುತ್ತಿದೆ. ದೇಶದ ಸಂಘಟನೆಯ ದೃಷ್ಟಿಯಿಂದ ಪ್ರತಿಯೊಬ್ಬರು ಏಕತಾ ನಡಿಗೆಯಲ್ಲಿ ಭಾಗವಹಿಸಬೇಕು ಎಂದರು.
ಕಾಡುಗೊಲ್ಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ದಿಶಾ ಸಮಿತಿ ಸದಸ್ಯ ಮದಲೂರು ನರಸಿಂಹಮೂರ್ತಿ, ಮಹಿಳಾ ಮೋರ್ಚಾ ಬಿಜೆಪಿ ಜಿಲ್ಲಾಧ್ಯಕ್ಷೆ ಉಮಾ ವಿಜಯರಾಜ್, ಒಬಿಸಿ ಮೋರ್ಚಾ ಅಧ್ಯಕ್ಷ ಮಾಗೋಡ್ ಪ್ರತಾಪ್, ನಗರಸಭೆ ಸದಸ್ಯ ರಂಗರಾಜು, ತಾ.ಪಂ ಮಾಜಿ ಸದಸ್ಯ ಚಿಕ್ಕಣ್ಣ, ಬರಗೂರು ಶಿವಕುಮಾರ್, ಈರಣ್ಣ ಪಟೇಲ್, ಸಂತೇಪೇಟೆ ನಟರಾಜು, ಮದ್ದೇವಳ್ಳಿ ರಾಮಕೃಷ್ಣ, ಪದ್ಮ ಮಂಜುನಾಥ್, ರತ್ನಮ್ಮ, ಕವಿತಾ, ನಾದೂರು ಕುಮಾರ್, ಮೂಗನಹಳ್ಳಿ ರಾಮು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


