ನರೇಂದ್ರ ಮೋದಿ ಭಾನುವಾರ ಸಂಜೆ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಜೊತೆ 71 ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಎಲ್ಲ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ.
ಪ್ರಮಾಣ ವಚನ ಸ್ವೀಕಾರದ ಸಮಯದಲ್ಲಿ ಸಾಮಾನ್ಯವಾಗಿ ಸಚಿವರು ನಾನು (ಹೆಸರು) ಕಾನೂನಿನ ಮೂಲಕ ಸ್ಥಾಪಿಸಿದಂತೆ ನಾನು ಭಾರತದ ಸಂವಿಧಾನಕ್ಕೆ ಪ್ರಮಾಣ ಮಾಡುತ್ತೇನೆ ಎಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಎಂದು ಮಂತ್ರಿಗಳ ಪ್ರಮಾಣ ವಚನವನ್ನು ಪೂರ್ಣಗೊಳಿಸಲಾಗುತ್ತದೆ. ಪ್ರಧಾನಿ ಕೂಡ ಅದೇ ರೀತಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ, ಭಾನುವಾರ ಟಿಡಿಪಿ ಸಂಸದ ಚಂದ್ರಶೇಖರ್ ಪೆಮ್ಮಸಾನಿ ಪ್ರಮಾಣ ವಚನ ಸ್ವೀಕರಿಸಿದಾಗ, ಅವರ ಮಾತುಗಳು ಇತರ ಸಚಿವರಿಗಿಂತ ಭಿನ್ನವಾಗಿತ್ತು.
ಟಿಡಿಪಿ ಸಂಸದ ಚಂದ್ರಶೇಖರ್ ಪೆಮ್ಮಸಾನಿ ಭಾನುವಾರ ಸಂಜೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಡೆದ ಸಮಾರಂಭದಲ್ಲಿ ಬೇರೆ ಸಚಿವರಿಗಿಂತಲೂ ಚಂದ್ರಶೇಖರ್ ಪೆಮ್ಮಸಾನಿ ಅವರ ಪ್ರಮಾಣ ವಚನ ಸ್ವಲ್ಪ ವಿಭಿನ್ನವಾಗಿತ್ತು. ನಾನು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಎಂದು ಅವರು ಹೇಳಿಲ್ಲ.
ಚಂದ್ರಶೇಖರ ಪೆಮ್ಮಸಾನಿ ಅವರು ತಮ್ಮ ಪ್ರಮಾಣ ವಚನದಲ್ಲಿ ಈಶ್ವರ ಅಥವಾ ದೇವರು ಎಂಬ ಪದವನ್ನು ಬಳಸಿಲ್ಲ. ರಾಜಕಾರಣಕ್ಕೆ ಇಳಿದಿರುವ ವೈದ್ಯರಾಗಿದ ಪೆಮ್ಮಸಾನಿ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಡಾ. ಪೆಮ್ಮಸಾನಿ ಚಂದ್ರಶೇಖರ್ ಆದ ನಾನು ಭಾರತದ ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದುತ್ತೇನೆ ಎಂದು ದೃಢಪಡಿಸುತ್ತೇನೆ ಎಂದಷ್ಟೇ ಹೇಳಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಂದರೆ, ಪೆಮ್ಮಸಾನಿ ದೇವರು ಎಂಬ ಪದವನ್ನು ಬಳಸಲಿಲ್ಲ.
#WATCH | TDP leader Dr Pemmasani Chandra Sekhar takes oath as a Union Cabinet Minister in the Prime Minister Narendra Modi-led NDA government pic.twitter.com/jdJeTbRlUZ
— ANI (@ANI) June 9, 2024
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA