ಬೆಂಗಳೂರು : ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಅವರನ್ನು ಕರ್ನಾಟಕದ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಕೊಲಿಜಿಯಂ ಸೆಪ್ಟೆಂಬರ್ 28 ರಂದು ನ್ಯಾಯಮೂರ್ತಿ ವರಾಳೆ ಅವರ ಉನ್ನತಿ ಶಿಫಾರಸು ಮಾಡಿತ್ತು. ನ್ಯಾ. ವರಾಳೆ ಅವರು 1962 ಜೂನ್ 23ರಂದು ಜನಿಸಿದ್ದು, 1985ರ ಆಗಸ್ಟ್ 12 ರಂದು ವಕೀಲರಾಗಿ ಸೇವೆ ಆರಂಭಿಸಿದರು.
ಬಳಿಕ 1990ರಿಂದ 1992ರವರೆಗೆ ಔರಂಗಾಬಾದ್ ನ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಕಾನೂನು ಉಪನ್ಯಾಸಕರಾಗಿ ಮತ್ತು ಸಹಾಯ ಸರ್ಕಾರಿ ಮತ್ತು ಹೆಚ್ಚುವರಿ ಸರ್ಕಾರಿ ಅಭಿಯೋಜಕರಾಗಿ, ಹೈಕೋರ್ಟ್ ಪೀಠಿದಲ್ಲಿ ಸೇವೆ ಸಲ್ಲಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


