ಕಾಪು :ವಿಧಾನ ಸಭಾ ವ್ಯಾಪ್ತಿಯಲ್ಲಿ ಮುಕ್ತ ಹಾಗು ನ್ಯಾಯ ಸಮ್ಮಾತ ನಡೆಸುವ ಸಲುವಾಗಿ ಪೊಲೀಸ್ ಇಲಾಖೆ ಕ್ಷಿಪ್ರ ಕಾರ್ಯಾಚಣೆ ಪಡೆ ಸನ್ನದ್ದಾರಾಗಿದ್ದು, ಶಿರ್ವ ಪರಿಸರದ ಜನತೆಯಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಪೂರ್ವಭಾವಿಯಾಗಿ ಸೋಮವಾರ ಸಂಜೆ ಪಥಸಂಚಲನ ನಡೆಯಿತು.
ಉಡುಪಿ ಜಿಲ್ಲಾ ಕಾಪು ವ್ರತ್ತ ವ್ಯಾಪ್ತಿಯ ಶಿರ್ವ ಮಂಚಕಲ್ ಪೇಟೆಯಲ್ಲಿ ಶಾಸ್ತ್ರಧಾರಿ ಕ್ಷಿಪ್ರ ಕಾರ್ಯಚಾರಣೆ ಪಡೆಯ ಯೋಧರು ಮತ್ತು ಕಾಪು ಶಿರ್ವ ಮತ್ತು ಪಡುಬಿದ್ರಿ ಠಾಣೆಯ ಸಿಬ್ಬಂದಿಯೊಂದಿಗೆ ಶಿರ್ವ ಅರೋಗ್ಯಮಾತಾ ದೇವಾಲಯದ ದ್ವರಾದ ಬಳಿಯಿಂದ ಶಿರ್ವ ಪೊಲೀಸ್ ಠಾಣೆಯವರೆಗೆ ಪಥಸಂಚಲನ ನಡೆಯಿತು.
ಕಾಪು ಕ್ಷೇತ್ರ ಚುನಾವಣಾಧಿಕಾರಿ ಭೀನೋಯ್, ಕಾಪು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಕಾಪು ವ್ರತ್ತ ನಿರೀಕ್ಷಿಕ ಕೆ. ಸಿ ಪೂವಯ್ಯ, ಕ್ಷಿಪ್ರ ಕಾರ್ಯಾಚರಣೆ ಪಡೆಯ ಇನ್ಸಪೆಕ್ಟಗಳಾದ ಟಿ. ಕೆ ಪಾಂಡೆ ಮತ್ತು ಕಾಪು ಪಿ ಎಸ್ ಐ
ಭರತೇಶ್ , ಶಿರ್ವ ಪಿ ಎಸ್ ರಾಘವೇಂದ್ರ ಹಾಗೂ ಸುಮಾರು 100 ಯೋಧರು ಮತ್ತು 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪಥಸಂಚಾಲನದಲ್ಲಿ ಭಾಗವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


