ಧಾರವಾಡ: ಧಾರವಾಡ ನಗರದ ಹಮ್ ಫೌಂಡೇಶನ್ ಭಾರತ್ ಪ್ರಭಾತ ಶಾಖೆ ಧಾರವಾಡ, ಕೆ.ಇ.ಬೋರ್ಡಿನ ಪ್ರಥಮ ದರ್ಜೆ ಕಲಾ ವಾಣಿಜ್ಯ ಮಹಾವಿದ್ಯಾಲಯ (IQAC) ಹಾಗೂ ಅಂತರದೃಷ್ಠಿ ಯೋಗ ಅಕಾಡೆಮಿ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಧಾರವಾಡ ಜಿಲ್ಲಾ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ-2023 ಯಶಸ್ವಿಯಾಗಿ ನಡೆಯಿತು.
ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಹಾಗೂ ವಯಸ್ಕರ ವಿಭಾಗಗಳಿಂದ ಒಟ್ಟು 420 ಯೋಗಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೂ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ವಿತರಿಸಲಾಯಿತು.
ವಯೋಮಾನಕ್ಕೆ ತಕ್ಕಂತೆ ಏಳು ವಿಭಾಗದಲ್ಲಿ ವಿಜೇತರಾದ ಯೋಗಪಟುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪ್ರಶಸ್ತಿ ಪತ್ರ ನೆನಪಿನ ಕಾಣಿಕೆ ಹಾಗೂ ಭಾಗವಹಿಸಿದ ಎಲ್ಲರಿಗೂ ಮೆಡಲ್ ಮತ್ತು ಭಾಗವಹಿಸಿದ ಶಾಲೆಗಳಿಗೆ ಟ್ರೋಪಿಗಳನ್ನು ನೀಡಲಾಯಿತು. ಸ್ಪರ್ಧೆಯ ನಿರ್ಣಾಯಕರಾಗಿ 30 ಜನ ಅನುಭವಿ ತರಬೇತಿದಾರರು ಭಾಗವಹಿಸಿ ಉತ್ತಮ ಫಲಿತಾಂಶ ನೀಡಿದರು. ಭಾಗವಹಿಸಿದ ಎಲ್ಲ 550 ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರುಗಳಿಗೆ ಉತ್ತಮ ಉಪಹಾರ ಊಟದ ವ್ಯವಸ್ಥೆಯನ್ನು ಸಮಪರ್ಕವಾಗಿ ಒದಗಿಸಲಾಗಿದೆ.

ಸಮಾರೋಪ ಹಾಗೂ ಪಾರಿತೋಷಕ ವಿತರಣೆ ಸಮಾರಂಭದ ಅಧ್ಯಕ್ಷರಾಗಿದ್ದ ಶ್ರೀಕಾಂತ ದೇವಗಿರಿ, ಉಪಾಧ್ಯಕ್ಷರು, ಹಮ್ ಫೌಂಡೆಶನ್ ಭಾರತ ಪ್ರಭಾತ ಶಾಖೆ ಧಾರವಾಡ ಅವರು ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಇಷ್ಟೊಂದು ಯೋಗ ಪಟುಗಳು ಆಸಕ್ತಿಯಿಂದ ಭಾಗವಹಿಸಿರುವುದು ಅತೀವ ಖುಷಿ ತಂದಿದೆ. ಈ ಸ್ಪರ್ಧೆಯನ್ನು ಅತ್ಯಂತ ವ್ಯವಸ್ಥಿತವಾಗಿ ಸಂಘಟಿಸಲು ಶ್ರಮಿಸಿದ ಶಿವಕುಮಾರ್ ಹಾಗೂ ಅಭಿಷೇಕ ಬಾರಕೇರ ಸಹೋದರರು, ಅವರ ಪಾಲಕರು, ಮಿತ್ರರು ಈ ಸ್ಪರ್ಧೆಯು ಈ ಮಟ್ಟದಲ್ಲಿ ನಡೆಯಲು ನಿರಂತರ ಪರಿಶ್ರಮ ವಹಿಸಿದ್ದಾರೆ. ಅವರಿಗೆ ಸಾಥ್ ನೀಡಿದ ಹಮ್ ಫೌಂಡೆಶನ್ ಎಲ್ಲ ಪದಾಧಿಕಾರಿಗಳು ಮತ್ತು ಕಾಲೇಜಿನ NSS ವಿದ್ಯಾರ್ಥಿಗಳು ತಮ್ಮೆಲ್ಲ ಸಹಕಾರ ನೀಡಿ ಸಾಥ್ ನೀಡಿದ್ದು ಪ್ರಶಂಸನೀಯ ಎಂದರು.
ಹಮ್ ಫೌಂಡೇಶನ್ ರಾಷ್ಟ್ರೀಯ ಸಂಯೋಜಕರಾದ ಡಾ.ಸುನೀತ ಪುರೋಹಿತ ಮಾತನಾಡಿ, ಈ ಸ್ಪರ್ಧೆ ಅತ್ಯಂತ ಯಶಸ್ವಿಗೆ ಶ್ರಮಿಸಿದ ಶಿವಕುಮಾರ ಹಾಗೂ ಅಭಿಷೇಕ ಬಾರಕೇರ ಅವರುಗಳ ಕ್ರಿಯಾಶೀಲತೆಗೆ ತಕ್ಕ ನಿದರ್ಶನವಾಗಿದೆ ಎಂದರು.
ಹಮ್ ಫೌಂಡೆಶನ್ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ವೆಂಕಟೇಶ ಶಿವಪೂಜಿ ಅವರು ಸ್ವಾಗತಿಸಿ, ಹಮ್ ಫೌಂಡೆಶನ್ ಭಾರತ ಶಾಖೆಯ ಧ್ಯೇಯೋದ್ದೇಶಗಳನ್ನು ಸಭಿಕರಿಗೆ ತಿಳಿಸಿಕೊಟ್ಟರು. ಕಾರ್ಯದರ್ಶಿ ಸುಮನ್ ಘಂಟೆಣ್ಣವರ ವಂದಿಸಿದರು. ಶ್ರೀಲಕ್ಷ್ಮಿ ಘಂಟೆಣ್ಣವರ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಪಾರಿತೋಷಕ ವಿತರಣೆ ಕಾರ್ಯಕ್ರಮವನ್ನು ಶಿವಕುಮಾರ ಹಾಗೂ ಅಭಿಷೇಕ ಬಾರಕೇರ ಸಹೋದರರು ನಡೆಸಿಕೊಟ್ಟರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಮುಕ್ತಾಯವಾಯಿತು.

ಜಿಲ್ಲಾ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ-2023
ವಿಭಾಗವಾರು ವಿಜೇತರ ವಿವರ ಈ ಕೆಳಗಿನಂತಿದೆ:
8-11 ಬಾಲಕ ವಿಭಾಗ
ಪ್ರಥಮ- ಶ್ರೇಯಸ್ ಘೋತೆ
ದ್ವಿತೀಯ- ಸಂಜಯ್ ಆರ್. ಹಿರೇಮಠ
ತೃತೀಯ- ವಿಜಯ ಅರಳಿಕಟ್ಟಿ
ಬಾಲಕಿಯರುವಿಭಾಗ
ಪ್ರಥಮ- ಸಾನ್ವಿ ತಟ್ಟಿನ
ದ್ವಿತೀಯ- ದಿತಿಕಾ ಚವ್ಹಾಣ್
ತೃತೀಯ- ಸಾನ್ವಿ ಸಲಗಾರ
12–15 ಬಾಲಕ ವಿಭಾಗ:
ಪ್ರಥಮ- ವಿನಾಯಕ ಅರಳಿಕಟ್ಟಿ
ದ್ವಿತೀಯ- ಶ್ರಿನಿವಾಸ ಜಾಲಿಕಟ್ಟಿ
ತೃತೀಯ- ಶ್ರೇಯಸ್ ಕೋಟೆ
ಬಾಲಕಿಯರ ವಿಭಾಗ
ಪ್ರಥಮ- ರಿಯಾ ಪಾಟೀಲ
ದ್ವಿತೀಯ- ಕೃತಿಕಾ ಎಚ್. ಅಂಬಿಗೇರ
ತೃತೀಯ- ಲಕ್ಷಿತಾ ಎಮ್ ಮಾಳಿ
16–19 ಬಾಲಕ ವಿಭಾಗ
ಪ್ರಥಮ- ಪವನ ಐ ಎನ್
ದ್ವಿತೀಯ- ಅಭಿಷೇಕ ಆರ್ ಪಲ್ಲೇದ
ತೃತೀಯ- ಸಂದೀಪ ಆರ್ ನಡಿಗೇರ
ಬಾಲಕಿಯರ ವಿಭಾಗ
ಪ್ರಥಮ- ಪ್ರಜ್ಞಾ ಪಿಸೆ
ದ್ವಿತೀಯ- ರತ್ನವ್ವ ಎಂ
ತೃತೀಯ- ಸುರೇಖಾ ಹುಡೇದ
20–25 ಪುರುಷರ ವಿಭಾಗ
ಪ್ರಥಮ: ಬೀಸಪ್ಪ ಬಿ
ದ್ವಿತೀಯ: ಅನ್ವರಭಾಷಾ ಎ ಕೊತಬಾಲ
ತೃತೀಯ: ವಿಶ್ವನಾಥ ಹಡಪದ
ಮಹಿಳೆಯರ ವಿಭಾಗ
ಪ್ರಥಮ- ಸವಿತಾ ಎನ್ ಮೊರಬದ
ದ್ವಿತೀಯ- ಪಲ್ಲವಿ ಮುರಗೋಡ
ತೃತೀಯ- ಶಿವಾನಿ ಕೆ ಪಾಟೀಲ
25–35 ಪುರುಷರ ವಿಭಾಗ
ಪ್ರಥಮ- ವಿಜಯಕುಮಾರ ಉಕ್ಕಲಿ
ದ್ವಿತೀಯ- ಶರಣಯ್ಯ ದೊಡ್ಡಯ್ಯ ಅಪ್ಪಣ್ಣವರ
ತೃತೀಯ- ಪ್ರದೀಪ ಜಿ ಸನದಿ
ಮಹಿಳೆಯರ ವಿಭಾಗ
ಪ್ರಥಮ- ಪೂಜಾ ಅರಕೇರಿ
ದ್ವಿತೀಯ- ಈರಮ್ಮ
ತೃತೀಯ- ವೀಣಾ ಐ ಹಿರೇಮಠ
35 ಕ್ಕಿಂತ ಮೇಲ್ಪಟ್ಟ ಪುರುಷರ ವಿಭಾಗ
ಪ್ರಥಮ- ಕಾಶಪ್ಪ ಹಡಗಲಿ
ದ್ವಿತೀಯ- ವೆಂಕಟೀಶ ಜಿತೂರಿ
ತೃತೀಯ- ಗಂಗಾಧರ ಕೆರಿಗಾರ
ಮಹಿಳೆಯರ ವಿಭಾಗ
ಪ್ರಥಮ- ಮಹಾಲಕ್ಷ್ಮಿ ಚಿಂದಿ
ದ್ವಿತೀಯ- ಎ ಎಸ್ ಲತಾ
ತೃತೀಯ- ಭಾಗ್ಯಶ್ರೀ ಘೋತೆ
ವಿಕಲಚೇತನರ ವಿಭಾಗ:
ಪ್ರಥಮ- ಕೃಷ್ಣಪ್ರಿಯಾ ಆನಂದ ಬದಿ
ಪ್ರಥಮ- ಲಕ್ಷ್ಮಿ ಬಿ ಅಸಂಗಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


