ಸರಗೂರು: ಮುಳ್ಳೂರು ಆಸ್ಪತ್ರೆಗೆ ಎರಡು ಬಾರಿ ಉತ್ತಮ ಆಸ್ಪತ್ರೆ ಪ್ರಶಸ್ತಿ ಬಂದಿದೆ. ಈ ವೈದ್ಯರು ಹಾಗೂ ಸಿಬ್ಬಂದಿಗಳು ಹೆಚ್ಚಿನ ರೀತಿಯಲ್ಲಿ ಬರುವ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾರ್ಟ್ ಸಂಸ್ಥೆ ಮೈಸೂರು, ರೋಟರಿ ಕ್ಲಬ್ ಆಪ್ ಮೈಸೂರು ವೆಸ್ಟ್ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್. ಡಿ.ಕೋಟೆ , ಪ್ರಾಥಮಿಕ ಆರೋಗ್ಯ ಕೇಂದ್ರ ಮುಳ್ಳೂರು ಗ್ರಾಮ ಪಂಚಾಯಿತಿ ಮುಳ್ಳೂರು, ಮುಳ್ಳೂರು ಗುರುಪ್ರಸಾದ್ ಜಿ.ಪಿ. ಗ್ರೂಪ್ಸ್ ಬಿಲ್ಡರ್ ಅಂಡ್ ಡೆವಲಪರ್ಸ್ ಮೈಸೂರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಇವರ ಸಹಯೋಗದೊಂದಿಗೆ ಮುಳ್ಳೂರು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಳ್ಳೂರು ಆಸ್ಪತ್ರೆ ಕೋಟೆ ಮತ್ತು ನಂಜನಗೂಡು ತಾಲೂಕಿನ ಮಧ್ಯದಲ್ಲಿದ್ದರು ತಾಲೂಕು ಆಸ್ಪತ್ರೆಗಳಿಗೆ ಸಂಪರ್ಕ ಇಲ್ಲಗೆ ತುರ್ತು ಸೇವೆಗೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುವುದು,.ಸಿಬ್ಬಂದಿಯ ಕೊರತೆ ಇದ್ದು ಮುಂದಿನ ದಿನಗಳಲ್ಲಿ ಎಲ್ಲವು ಸರಿಯಾಗಲಿದೆ ಎಂದರು.
ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದು, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಇ.ಸಿ.ಜಿ, ಕಣ್ಣಿನ ಪರೀಕ್ಷೆ ಶ್ವಾಸಕೋಶ ಪರೀಕ್ಷೆ ಇದ್ದು ಎಲ್ಲರು ಇದರ ಸದುಪಯೋಗ ಪಡಿಸಿಕೊಂಡು ಆರೋಗ್ಯವಂತರಾಗಿರಿ ಎಂದು ತಿಳಿಸಿದರು.
ಆರೋಗ್ಯವೇ ಭಾಗ್ಯ ಈ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಹಾರ್ಟ್ ಸಂಸ್ಥೆಯು 8 ಶಿಬಿರಗಳನ್ನು ನಮ್ಮ ತಾಲೂಕಿನಲ್ಲಿ ನಡೆಸಿದ್ದು ಇದು 9 ನೆಯ ಶಿಬಿರ, ಇಂತಹ ಕುಗ್ರಾಮಗಳಲ್ಲಿ ಶಿಬಿರಗಳು ನಡೆಯಬೇಕು ಈ ಭಾಗದಲ್ಲಿ ತಾಲೂಕಿನ ಆಸ್ಪತ್ರೆಗಳು ಸಂಪರ್ಕ ಇಲ್ಲದೆ ಇರುವುದರಿಂದ ಇಲ್ಲಿಗೆ ತಜ್ಞ ವೈದ್ಯರನ್ನು ಕರೆಯಿಸಿ ತಪಾಸಣೆ ನಡೆಸುತ್ತಿದ್ದು, ಕಾಡಂಚಿನ ಗ್ರಾಮಗಳಿಗೆ ತುರ್ತು ಸಂದರ್ಭದ ಚಿಕಿತ್ಸೆಗಾಗಿ ಅಬುಲೆನ್ಸ್ ನೀಡಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದ ಪ್ರಸ್ತಾವಿಕ ಮಾತನಾಡಿ, ಹಾರ್ಟ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ್, ಕಾಯಿಲೆಗಳನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಲು ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುತ್ತಿದ್ದು ಆರೋಗ್ಯವೇ ಭಾಗ್ಯ, ಹಣ ಅಂತಸ್ತು ಏನೇ ಇದ್ದರು ಆರೋಗ್ಯ ಸರಿ ಇಲ್ಲದೆ ಹೋದರೆ ಬದುಕೇ ಶೂನ್ಯ ಈ ನಿಟ್ಟಿನಲ್ಲಿ ಈ ಆರೋಗ್ಯ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ವೇದಿಕೆಯಲ್ಲಿ ಮುಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಹೇಂದ್ರ ಸ್ವಾಮಿ, ಬಿಲ್ ಕಲೆಕ್ಟರ್ ನಾಗರಾಜು, ಕಾಂಗ್ರೇಸ್ ಮುಖಂಡ ಪುಟ್ಟಸ್ವಾಮಿ ಇದ್ದರು.
ಈ ಶಿಬಿರದಲ್ಲಿ 60 ಜನರು ಬಿಪಿ ಮತ್ತು ಶುಗರ್ ಪರೀಕ್ಷೆ, ಸಾಮಾನ್ಯ ರೋಗ ತಪಾಸಣೆ 65 ಜನ, ಕಣ್ಣಿನ ಪರೀಕ್ಷೆ 50, ಇಸಿಜಿ 30 ಜನರು ಮಾಡಿಸಿಕೊಂಡರು, ಶ್ವಾಸಕೋಶ ಪರೀಕ್ಷೆಗೆ 30 ಜನ ಒಳಪಟ್ಟರು
ಶಿಬಿರದಲ್ಲಿ ಮೈಸೂರು ಎ.ಎಸ್.ಜಿ ಕಣ್ಣಿನ ಆಸ್ಪತ್ರೆಯ ಮಹೇಶ್, ಜಾರ್ಜ್, ಮತ್ತು ತಂಡ, ನಾರಾಯಣ ಹೆಲ್ತ್ ಸುಪ್ರೀತ್ ಮತ್ತು ತಂಡ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಿಬ್ಬಂದಿ ರವಿರಾಜ್, ಶರಣಪ್ಪ, ಆಸೀಮಾ, ರೇಖಾ, ಮುಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ವೀರಭದ್ರ ಶಿವೇಶ, ವಿನಯ ಕುಮಾರ್, ಶಿವಮ್ಮ, ನೀಲಮ್ಮ ಮಹಾಲಕ್ಷ್ಮಿ, ಸುಬ್ರಮಣ್ಯ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಕಾರ್ಯಕ್ರಮದ ಸುನಂದ, ಸಾರ್ವಜನಿಕರು ಇದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


