ಹೆಚ್.ಡಿ.ಕೋಟೆ: ಫುಟ್ಪಾತ್ ನ್ನು ಅತಿಕ್ರಮಿಸಿ ಪುರಸಭೆ ಸದಸ್ಯ ಮಿಲ್ ನಾಗರಾಜು ಎಂಬವರು ಅಂಗಡಿ ತೆರೆಯಲು ಮುಂದಾದ ಘಟನೆ ನಡೆದಿದ್ದು, ಪುರಸಭೆ ಸಿಬ್ಬಂದಿ ಶೆಡ್ ನಿರ್ಮಾಣ ಮಾಡಲು ಬಳಸಿದ್ದ ಪರಿಕರಗಳನ್ನು ಕಿತ್ತೆಸೆದು ಅತೀಕ್ರಮ ತಡೆದರು.
ರಸ್ತೆಯನ್ನು ಅತಿಕ್ರಮಿಸಿ ಅಂಗಡಿ ತೆರೆಯಲು ಮುಂದಾದ ಬಗ್ಗೆ ಆಕ್ರೋಶಗೊಂಡ ಪಟ್ಟಣದ ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪುರಸಭೆ ಸಿಬ್ಬಂದಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಸಿ.ನರಸಿಂಹಮೂರ್ತಿ, ನೀವು ಈಗಾಗಲೇ ಒಂದು ಅಂಗಡಿಯನ್ನು ಹೊಂದಿದ್ದೀರಿ, ಫುಟ್ಪಾತ್ ಅತಿಕ್ರಮಿಸಿದ್ರೆ, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಇಲ್ಲಿ ಅಂಗಡಿ ತೆರೆಯಬೇಡಿ ಎಂದು ಮಿಲ್ ನಾಗರಾಜು ಅವರಿಗೆ ತಾಕೀತು ಮಾಡಿದರು.
ಈ ವೇಳೆ ನಾಗರಾಜು ಮತ್ತು ನರಸಿಂಹಮೂರ್ತಿ ನಡುವೆ ವಾಕ್ಸಮರವೇ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮೊದಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


