ಧಾರವಾಡ: ಆಸ್ತಿಗಾಗಿ ವೃದ್ಧೆಯನ್ನು ಕೊಲೆ ಮಾಡಿದ ಪರಾರಿಯಾಗಿರುವ ಘಟನೆ ಧಾರವಾಡ ಹೊರವಲಯದ ನವಲೂರ ಗ್ರಾಮದಲ್ಲಿ ನಡೆದಿದೆ. ಕರೆವ್ವ ಈರಪ್ಪಗೆರಿ ಕೊಲೆಯಾದ ವೃದ್ಧೆ.
ದುಷ್ಕರ್ಮಿಗಳು ಆಸ್ತಿ ವಿಚಾರವಾಗಿ ವೃದ್ಧೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾರವಾಡ ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ವೃದ್ಧೆಯ ಶವವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.


