ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಸಂಬಂಧ ಮತ್ತೊಬ್ಬ ಶಂಕಿತನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ದೇವೇಂದ್ರ ಅಲಿಯಾಸ್ ಕಾಲಾ ಎಂದು ಗುರುತಿಸಲಾಗಿದ್ದು, ಮೇ ೨೯ ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಪಂಜಾಬಿ ಗಾಯಕನನ್ನು ಕೊಂದ ಶೂಟರ್‌ಗಳಿಗೆ ವಾಹನವನ್ನು ಒದಗಿಸಿದ ಶಂಕೆ ಇದೆ.
ಮೂಸೆವಾಲಾ ಹತ್ಯೆಗೂ ಮುನ್ನ ದೇವೇಂದ್ರ ಎರಡು ಶಂಕಿತ ಕೊಲೆಗಾರರಾದ ಕೇಶವ್ ಮತ್ತು ಚರಂಜೀತ್ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಸದ್ಯ ದೇವೇಂದ್ರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಫತೇಪುರ್ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ. ಮತ್ತೊಂದೆಡೆ, ಪಂಜಾಬ್ ಪೊಲೀಸ್ ಮತ್ತು ಫತೇಹಾಬಾದ್ ಪೊಲೀಸರ ಜಂಟಿ ತಂಡವು ದಾಳಿಯ ಸಂದರ್ಭದಲ್ಲಿ ಪವನ್ ಬಿಷ್ಣೋಯ್ ಮತ್ತು ನಸೀಬ್ ಖಾನ್ ಎಂಬ ಯವಕರರನ್ನು ಭಿರ್ದಾನದಿಂದ ಜೂನ್ ೨ ರಂದು ಬಂಧಿಸಿತ್ತು.
ಇನ್ನೂ, ಪಂಜಾಬ್ ಪೊಲೀಸ್ ಮತ್ತು ದೆಹಲಿ ಪೊಲೀಸರ ಜಂಟಿ ತಂಡವು ಲಾರೆನ್ಸ್ ಗ್ಯಾಂಗ್‌ನ ೮ ಶೂಟರ್‌ಗಳಿಗಾಗಿ ಲುಕ್‌ಔಟ್ ಹೊರಡಿಸಿದೆ. ಈ ಶೂಟರ್‌ಗಳ ಪೈಕಿ ಒಬ್ಬ ರಾಜಸ್ಥಾನ, ಇಬ್ಬರು ಪಂಜಾಬ್, ಇಬ್ಬರು ಸೋನಿಪತ್‌ನವರು ಎನ್ನಲಾಗುತ್ತಿದೆ.
ಹಿನ್ನೆಲೆ: ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಮೇ ೨೯ ರಂದು ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಗಾಯಕನ ಭದ್ರತೆಯನ್ನು ಪಂಜಾಬ್ ಸರ್ಕಾರ ಹಿಂತೆಗೆದುಕೊಂಡ ಕೆಲವು ದಿನಗಳ ನಂತರ ಈ ಹತ್ಯೆ ನಡೆದಿತ್ತು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5