ಬೆಳಗಾವಿ: “ಕ್ಷೇತ್ರದ ವಿವಿಧೆಡೆ ಸರಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಸೇವೆ ಪ್ರಾರಂಭಿಸಲು ಸಾಕಷ್ಟು ಅನುದಾನ ನೀಡಲಾಗುತ್ತಿದ್ದು ಮುಂಬರುವ ದಿನಗಳಲ್ಲಿ ಬಹುತೇಕ ಎಲ್ಲ ಶಾಲೆಗಳೂ ಸ್ಮಾರ್ಟ್ ಕ್ಲಾಸ್ ಹೊಂದುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಸ್ವರೂಪವೇ ಬದಲಾದರೆ ಅಚ್ಚರಿಯಿಲ್ಲ” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದ ಸರ್ಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆಗೆ ಒದಗಿಸಿರುವ ನೂತನ ಸ್ಮಾರ್ಟ್ ಕ್ಲಾಸ್ ಸೇವೆ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಮಾರ್ಟ್ ಕ್ಲಾಸ್ ಸೇವೆಯಲ್ಲಿ ಪ್ರೊಜೆಕ್ಟರ್, ಎಸಿ, ಬೆಂಚ್, ಯುಪಿಎಸ್ ಮತ್ತು ಇನ್ವರ್ಟರ್, ಕಂಪ್ಯೂಟರ್, ಪ್ರಿಂಟರ್, ಟ್ಯಾಬ್, ಸ್ಮಾರ್ಟ್ ಕ್ಯಾಬಿನೆಟ್, ಪೋಡಿಯಮ್, ವಿಂಡೋ ಕರ್ಟನ್ಸ್, ಡೋರ್, ಮ್ಯಾಟ್ಸ್, ಡಿಜಿಟಲ್ ಕಂಟೆಂಟ್, ಎಲೆಕ್ಟ್ರಿಷಿಯನ್, ವಾಲ್ ಕ್ಲಾಕ್, ನೇಮ್ ಪ್ಲೇಟ್, ಪೇಂಟಿಂಗ್, ಟೈಲ್ಸ್ ಹಾಗೂ ಮುಂತಾದ ಸಾಮಗ್ರಿಗಳನ್ನು ಅಳವಡಿಸಲಾಗಿದೆ.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಗಜಾನನ ಮುತಗೇಕರ, ಶ್ಯಾಮ ಮುತಗೇಕರ್, ಗಜಾನನ ಕಣಬರ್ಕರ್, ಪಿಂಟು ಮಲ್ಲವ್ವಗೋಳ, ಸಂದೀಪ ಪಾಟೀಲ, ಶ್ಯಾಮ ಪಾಟೀಲ, ಗಜಾನನ ಪಾಟೀಲ, ಮಹೇಶ ಪಾಟೀಲ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


